
ನವದೆಹಲಿ: ರಾಜಕೀಯವಾಗಿ ಸೂಕ್ಷ್ಮವಾಗಿರುವ ಅಯೋಧ್ಯೆಯ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಜಾಗದ ವಿವಾದದ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಕಾಯ್ದಿರಿಸಿದ್ದು, ಮುಂದಿನ 23 ದಿನದೊಳಗೆ ತೀರ್ಪು ಘೋಷಣೆ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಯೋಧ್ಯೆ ಜಿಲ್ಲೆಗೆ 153 ಕಂಪನಿ ಕೇಂದ್ರ ಸೇನಾಪಡೆಯನ್ನು ರವಾನಿಸಿದೆ.
ಅಲ್ಲದೇ ಕೇಂದ್ರ ಪೊಲೀಸ್ ಪಡೆ, ರಾಜ್ಯ ಶಸ್ತ್ರಾಸ್ತ್ರ ಪೊಲೀಸ್ ಪಡೆ, ಸಿಆರ್ ಪಿಎಫ್ ರಾಪಿಡ್ ಆ್ಯಕ್ಷನ್ ಫೋರ್ಸ್, ಉತ್ತರಪ್ರದೇಶ ಪೊಲೀಸರನ್ನು ಬಿಗಿ ಬಂದೋಬಸ್ತ್ ಗೆ ನಿಯೋಜಿಸಿದೆ ಎಂದು ವರದಿ ವಿವರಿಸಿದೆ.
ಜೀ ನ್ಯೂಸ್ ವರದಿ ಪ್ರಕಾರ, ಕೇಂದ್ರ ಸೇನಾಪಡೆ ಅಯೋಧ್ಯೆಗೆ ಆಗಮಿಸಲು ಆರಂಭವಾಗಿದ್ದು, ನೂರಾರು ಟ್ರಾಫಿಕ್ ಪೊಲೀಸರನ್ನು ಕೂಡಾ ನೆರೆಯ ಜಿಲ್ಲೆಗಳಿಂದ ನಿಯೋಜಿಸಲಾಗುತ್ತಿದೆ. ತೀರ್ಪು ಪ್ರಕಟವಾಗುವ ದಿನ ಲಾರಿ, ಬಸ್ ನಂತಹ ವಾಹನಗಳು ನಗರ ಪ್ರವೇಶಿಸದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ನಿಲ್ಲಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.
Comments are closed.