ರಾಷ್ಟ್ರೀಯ

3 ಸಿನೆಮಾಗಳಿಂದ ಒಂದೇ ದಿನದಲ್ಲಿ 120 ಕೋಟಿ ಸಂಪಾದನೆ; ಹಾಗಾದರೆ ಆರ್ಥಿಕ ಹಿಂಜರಿತ ಎಲ್ಲಿದೆ?

Pinterest LinkedIn Tumblr


ಹೊಸದಿಲ್ಲಿ: ಅ.2ರಂದು ಮೂರು ಚಿತ್ರಗಳು 120 ಕೋಟಿ ರೂ. ಸಂಪಾದಿಸಿವೆ. ಇನ್ನು ಆರ್ಥಿಕ ಹಿಂಜರಿತ ಎಲ್ಲಿದೆ ಹೇಳಿ..

ಹೀಗೆಂದು ಪ್ರಶ್ನಿಸಿದ್ದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಹಿಂಜರಿತದ ಬಗ್ಗೆ ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದರು.

ನಾನು ವಾಜಪೇಯಿಯವರ ಸಂಪುಟದಲ್ಲಿ ಪ್ರಸಾರ ಮತ್ತು ಮಾಹಿತಿ ಖಾತೆ ಹೊಂದಿದ್ದೆ, ಚಲನಚಿತ್ರಗಳ ಬಗ್ಗೆ ಒಳ್ಳೆಯ ಆಸಕ್ತಿ ಇದೆ. ಚಿತ್ರಗಳು ಉತ್ತಮ ವ್ಯವಹಾರ ನಡೆಸುತ್ತಿವೆ. ಅ.2ರಂದು ಬಿಡುಗಡೆ ಆದ ಚಿತ್ರಗಳು 120 ಕೋಟಿ ರೂ. ಗಳಿಸಿದ್ದಾಗಿ ಚಿತ್ರ ವಿಮರ್ಶಕರು ನನ್ನೊಂದಿಗೆ ಹೇಳಿದ್ದಾರೆ. 120 ಕೋಟಿ ರೂ. ಸಂಪಾದನೆ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂಬುದಾಗಿದೆ ಎಂದು ಹೇಳಿದರು.

Comments are closed.