ರಾಷ್ಟ್ರೀಯ

ಢಾಕಾ, ಕಲ್ನಾ ಮತ್ತು ತ್ರಿಪುರಾದ ಮೂರು ಪ್ರಮುಖ ಯೋಜನೆಗಳಿಗೆ ಜಂಟಿಯಾಗಿ ಶೀಘ್ರದಲ್ಲೇ ಚಾಲನೆ.

Pinterest LinkedIn Tumblr

ನವದೆಹಲಿ,ಅ.5: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ದೇಶದ ಸಹವರ್ತಿ ಶೇಖ್ ಹಸೀನಾ ಅವರು ರಾಜಧಾನಿ ನವ ದೆಹಲಿಯಲ್ಲಿಂದು ಮೂರು ಮಹತ್ವದ ಯೋಜನೆಗಳಿಗೆ ಚಾಲನೆ ನೀಡುವರು. ಅಲ್ಲದೆ ಭಾರತ-ಬಾಂಗ್ಲಾ ನಡುವೆ ಸಾರಿಗೆ ಸಂಪರ್ಕ, ಸಾಮಥ್ರ್ಯ ನಿರ್ಮಾಣ ಮತ್ತು ಸಂಸ್ಕಂತಿ ಕ್ಷೇತ್ರಗಳೂ ಸೇರಿದಂತೆ 7 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ.

ಭಾರತ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಮತ್ತು ನರೇಂದ್ರ ಮೋದಿ ದೆಹಲಿಯಲ್ಲಿಂದು ನಡೆಯುವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಢಾಕಾ, ಕಲ್ನಾ ಮತ್ತು ತ್ರಿಪುರಾದ ಮೂರು ಪ್ರಮುಖ ಯೋಜನೆಗಳಿಗೆ ಜಂಟಿಯಾಗಿ ಚಾಲನೆ ನೀಡಿವರು.

ಬಾಂಗ್ಲಾ ರಾಜಧಾನಿ ಢಾಕಾದ ರಾಮಕೃಷ್ಣ ಮಿಷನ್‍ನಲ್ಲಿ ನಾಲ್ಕು ಅಂತಸ್ತುಗಳ ವಿವೇಕಾನಂದ ಭವನ ಉದ್ಘಾಟನೆ, ಕಲ್ನಾದಲ್ಲಿ ಭಾರತ-ಬಾಂಗ್ಲಾ ಕೌಶಲ್ಯ ಅಭಿವೃದ್ಧಿ ಕೇಂದ್ರ ಸಮರ್ಪಣೆ ಹಾಗೂ ತ್ರಿಪುರಾದಲ್ಲಿ ಉಭಯ ದೇಶಗಳ ನಡುವಣ ಎಲ್‍ಪಿಜಿ ಸಂಪರ್ಕ ವ್ಯವಸ್ಥೆಗೆ ಉಭಯ ನಾಯಕರು ಚಾಲನೆ ನೀಡುವರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದೇ ಸಂದರ್ಭದಲ್ಲಿ ಉಭಯ ದೇಶಗಳ ನಿಯೋಗಗಳ ನಡುವೆ 7ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗುತ್ತಿದೆ.

ಸಾರಿಗೆ,ಸಂಪರ್ಕ, ಸಾಮಥ್ರ್ಯ ನಿರ್ಮಾಣ ಮತ್ತು ಸಂಸ್ಕಂತಿ ಕ್ಷೇತ್ರಗಳಲ್ಲಿ ಒಪ್ಪಂದ ಹಾಕಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‍ಕುಮಾರ್ ತಿಳಿಸಿದ್ದಾರೆ. ನಿನ್ನೆ ಸಂಜೆ ಶೇಖ್ ಹಸೀನಾ ಅವರಿಗೆ ದೆಹಲಿಯಲ್ಲಿರುವ ಬಾಂಗ್ಲಾ ರಾಯಭಾರಿ ಕಚೇರಿ ಔತನಕೂಟ ಏರ್ಪಡಿಸಿತ್ತು. ಸಭೆಯ ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಪೌರತ್ವ (ಎನ್‍ಆರ್‍ಸಿ) ವಿಷಯದಲ್ಲಿ ಭಾರತದಿಂದ ಬಾಂಗ್ಲಾ ದೇಶಕ್ಕೆ ಯಾವುದೇ ತೊಂದರೆಯಿಲ್ಲ.

ಈ ವಿಷಯವನ್ನು ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ 74ನೇ ಮಹಾಅಧಿವೇಶನ ವೇಳೆ ತಮಗೆ ಭರವಸೆ ನೀಡಿರುವುದಾಗಿ ಹೇಳಿದರು. ಇಂದಿನ ಸಭೆಯಲ್ಲಿ ಮೋದಿಯವರೊಂದಿಗೆ ಎನ್‍ಆರ್‍ಸಿ ವಿಷಯ ಕುರಿತು ಚರ್ಚಿಸುವುದಾಗಿ ಶೇಖ್ ಹಸೀನಾ ತಿಳಿಸಿದರು.

Comments are closed.