ಕರ್ನಾಟಕ

ಮಹಿಳೆಯೊಂದಿಗೆ ಎಎಸ್​ಐ ಅನುಚಿತ ವರ್ತನೆ ಆರೋಪ: ಪ್ರಕರಣಕ್ಕೆ ಟ್ವಿಸ್ಟ್​ ನೀಡಿದ ಮಹಿಳೆ ಹೇಳಿಕೆ

Pinterest LinkedIn Tumblr


ದಾವಣಗೆರೆ: ಇಡೀ ಗ್ರಾಮ ಗಣಪತಿ ವಿಸರ್ಜನೆ ಸಂಭ್ರಮದಲ್ಲಿದ್ದರೆ, ಕರ್ತವ್ಯ ನಿರತ ಪೊಲೀಸ್‌ ಕಾನೂನು ಸುವ್ಯವಸ್ಥೆ ನಿರ್ವಹಿಸುವ ಬದಲು ಮನೆಯಲ್ಲಿದ್ದ ಒಂಟಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾಗ ಮಹಿಳೆಯ ಸಂಬಂಧಿಕರ ಕೈಗೆ ಸಿಕ್ಕಿಬಿದ್ದು, ಧರ್ಮದೇಟು ತಿಂದಿದ್ದಲ್ಲದೆ ಗ್ರಾಮಸ್ಥರ ವಿರುದ್ಧವೇ ದೂರು ನೀಡಿರುವ ಘಟನೆ ನಡೆದಿದೆ.

ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕೆಲಸ ನಿರ್ವಹಿಸುತ್ತಿರುವ ಓಬಳೇಶ ನಾಯಕ, ಇದೇ ತಿಂಗಳ ೨೦ರಂದು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಬಂದೋಬಸ್ತ್‌ ಕರ್ತವ್ಯ ಬಿಟ್ಟು ಮನೆಯಲ್ಲಿದ್ದ ಒಂಟಿ ಮಹಿಳೆಯೊಂದಿಗೆ ಅನುಚಿತ ಕಾರ್ಯದಲ್ಲಿ ತೊಡಗಿದ್ದ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯೊಂದಿಗೆ ಇದ್ದ ಆತನನ್ನು ಕಂಡ ಮಹಿಳೆಯ ಸಂಬಂಧಿಕರು ಹಾಗೂ ಗ್ರಾಮಸ್ಥರು ಅವನನ್ನು ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಅಧಿಕಾರಿಗಳು ಜನರನ್ನು ಸಮಾಧಾನಪಡಿಸಿ, ಓಬಳೇಶನನ್ನು ಆಸ್ಪತ್ರೆ ದಾಖಲಿಸಿದ್ದರು. ಪೊಲೀಸಪ್ಪ ತನ್ನೊಂದಿಗೆ ಅನುಚಿತ ವರ್ತನೆ ಮಾಡಿಲ್ಲ. ಸಂಬಂಧಿಕರು ಏಕೆ ಹೊಡೆದರೂ ಗೊತ್ತಿಲ್ಲ ಹೇಳಿಕೆ ನೀಡಿದ್ದಾಳೆ.

ನೀರು ಕೇಳೋಕೆ ಹೋಗಿದ್ದಾಗ ಜನ ಥಳಿಸಿದ್ದಾರೆ ಎಂದು ಓಬಳೇಶಪ್ಪ ದೂರು ನೀಡಿದ್ದು, ಇದರ ಅನ್ವಯ ಪೊಲೀಸರು ಗ್ರಾಮದ ಒಂಬತ್ತು ಜನರನ್ನು ಬಂಧಿಸಿದ್ದಾರೆ. ನೀರು ಕೇಳೋಕೆ ಬಂದೋರಿಗೆ ಯಾರಾದ್ರೂ ಹೊಡಿತಾರಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಾಗಿದೆ.

Comments are closed.