
ಬಾಲಿವುಡ್ ನ ಹಾಟ್ ನಟಿ ಎಂದೆ ಒಂದು ಕಾಲದಲ್ಲಿ ಫೇಮಸ್ ಆಗಿದ್ದ ನಟಿ ರವೀನಾ ಟಂಡನ್ ಇದೀಗಾ ಅಜ್ಜಿಯಾಗುತ್ತಿದ್ದರಂತೆ. ಹೌದಾ ಇದು ಖಂಡಿತವಾಗಿಯೂ ನಿಜನಾ ಎಂದು ಶಾಕ್ ಆಗಬೇಡಿ… ಅಷ್ಟಕ್ಕೂ ಹೀಗಂತ ನಾವು ಹೇಳ್ತಿರೋದಲ್ಲ. ಸ್ವತಃ ರವೀನಾ ಅವರೆ ಹೇಳಿಕೊಂಡಿದ್ದಾರೆ. ಏನಿದು ಅಂತೀರಾ ಹಾಗಾದರೆ ಈ ಸ್ಟೋರಿ ಓದಿ..
ಹೌದು ಬಾಲಿವುಡ್ ನಟಿ ರವೀನಾ ಟಂಡನ್ ರವರು ತಾವು ಆದಷ್ಟು ಶೀಘ್ರವೇ ಅಜ್ಜಿಯಾಗುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೇ ರವೀನಾ ಟಂಡನ್ ಅಷ್ಟು ದೊಡ್ಡ ಮಕ್ಕಳಿದ್ದಾರಾ ಎಂದು ನೀವು ಅಚ್ಚರಿ ಪಡುತ್ತಿದ್ದೀರಾ. ಖಂಡಿತವಾಗಿಯೂ ಇದ್ದಾರೆ. ಆದರೆ ಅವರ ಸ್ವಂತ ಮಕ್ಕಳಲ್ಲ.
ಸಿನಿಮಾ ಕೆರಿಯರ್ ನ ಉತ್ತುಂಗದಲ್ಲಿದ್ದಾಗಲೇ, 1995 ರಲ್ಲಿ ರವೀನಾ ಪೂಜಾ ಮತ್ತು ಛಾಯಾ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ಒಂದೇ ಬಾರಿಗೆ ದತ್ತು ಪಡೆದಿದ್ದರು. ಆಗ ಆ ಇಬ್ಬರು ಮಕ್ಕಳಿಗೂ 11 ವರ್ಷ ಮತ್ತು 8 ವರ್ಷ ವಯಸ್ಸಾಗಿತ್ತು . ವಿದ್ಯಾಭ್ಯಾಸದ ಬಳಿಕ 2016 ರಲ್ಲಿ ಗೋವಾದಲ್ಲಿ ನಡೆದ ಹಿಂದೂ-ಕ್ಯಾಥೊಲಿಕ್ ಸಮಾರಂಭವೊಂದರಲ್ಲಿ ಶಾನ್ ಮೆಂಡಿಸ್ ಎಂಬುವವರನ್ನು ಛಾಯಾ ಅವರು ವಿವಾಹವಾಗಿದ್ದರು.
ಇದೀಗ ಛಾಯಾ ಗರ್ಭಿಣಿಯಾಗಿದ್ದು, ಇನ್ನೂ ಕಳೆದ ವಾರವಷ್ಟೇ ರವೀನಾ ಕುಟುಂಬ ದತ್ತು ಮಗಳ ಸೀಮಂತವನ್ನು ಅದ್ದೂರಿಯಾಗಿ ನೆರವೇರಿಸಿದೆ.ಅಲ್ಲದೆ ರವೀನಾ ತಮ್ಮ ಇನ್ ಸ್ಟಾಗ್ರಾಂ ನಲ್ಲಿ “ನಾನು ಮತ್ತು ನನ್ನ ಸಂಸಾರ! ನನ್ನ ಮಗುವಿನ ಮಗುವಿಗೆ ಕೌಂಟ್ಡೌನ್ ಪ್ರಾರಂಭವಾಗಿದೆ” ಎಂದು ಬರೆದುಕೊಂಡಿದ್ದು, ಜೊತೆಗೆ ಛಾಯಾ ಅವರ ಸೀಮಂತದ ಅನೇಕ ಚಿತ್ರಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.
ಅಲ್ಲದೆ ತೊಂಬತ್ತರ ದಶಕದ ಬಾಲಿವುಡ್ ಟಾಪ್ ನಟಿಯರ ಪೈಕಿ ಒಬ್ಬರಾಗಿದ್ದ ರವೀನಾ ಟಂಡನ್ ಸಲ್ಮಾನ್ ಖಾನ್,ಅಜಯ್ ದೇವ್‌ಗನ್ , ಅನಿಲ್ ಕಪೂರ್ , ಲಾಡ್ಲಾ ಸೇರಿ ಅಕ್ಷಯ್ ಕುಮಾರ್, ಸನ್ನಿ ಡಿಯೋಲ್, ಗೋವಿಂದ ಇನ್ನೂ ಹಲವು ನಟರೊಂದಿಗೆ ಅಭಿನಯಿಸಿದ್ದರು. ವಿಶೇಷವೆಂದರೆ ಸ್ಯಾಂಡಲ್ ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ “ಉಪೇಂದ್ರ” ಚಿತ್ರದಲ್ಲಿಯೂ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ ಈ ಚಿತ್ರದ ಮಸ್ತ್ ಮಸ್ತ್ ಹುಡುಗಿ ಸಾಂಗ್ ಕನ್ನಡ ಪ್ರೇಕ್ಷಕರನ್ನು ಈಗಲೂ ಎದ್ದು , ಬಿದ್ದು ಕುಣಿಯುವಂತೆ ಮಾಡವಷ್ಟು ಫೇಮಸ್ ಆಗಿದೆ.
Comments are closed.