ಅಂತರಾಷ್ಟ್ರೀಯ

ಚಂದ್ರಯಾನ ವೈಫಲ್ಯಕ್ಕೆ ಗೇಲಿ; ಪಾಕ್ ಸಚಿವನಿಗೆ ತಿರುಗೇಟು ನೀಡಿದ ಭಾರತೀಯರು

Pinterest LinkedIn Tumblr


ಭಾರತ- ಪಾಕಿಸ್ತಾನ ನಡುವಿನ ವಾದ-ವಿವಾದ ಹೊಸತೇನಲ್ಲ. ಚಂದ್ರಯಾನ ವಿಷಯದಲ್ಲೂ ಭಾರತದ ವೈಫಲ್ಯವನ್ನು ಪಾಕಿಸ್ತಾನ ಗೇಲಿ ಮಾಡಿದ್ದು, ಭಾರತ ವಿಫಲವಾಗಿದೆ ಎಂದು ಹ್ಯಾಶ್​ಟ್ಯಾಗ್ ಹಾಕಿ ಟ್ವಿಟ್ಟರ್​ನಲ್ಲಿ ಕಾಲೆಳೆಯುತ್ತಿದ್ದಾರೆ. ಇದಕ್ಕೆ ಭಾರತೀಯರು ತಿರುಗೇಟು ನೀಡುತ್ತಿದ್ದಾರೆ.

ಚಂದ್ರಯಾನ-2 ಯಶಸ್ವಿಯಾಗುವ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ನಿರಾಸೆಯಾಗಿದೆ. ಚಂದ್ರನ ಮೇಲೆ ಇಳಿಯಲು ಸ್ವಲ್ಪ ದೂರದಲ್ಲಿದ್ದಾಗಲೇ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡಿತ್ತು. ಚಂದ್ರನತ್ತ ಯಶಸ್ವಿಯಾಗಿ ಉಪಗ್ರಹವನ್ನು ಉಡಾವಣೆ ಮಾಡಿದ್ದ ಇಸ್ರೋ ವಿಜ್ಞಾನಿಗಳು ಇಡೀ ವಿಶ್ವವೇ ನಮ್ಮ ದೇಶದತ್ತ ತಿರುಗಿ ನೋಡುವಂತೆ ಮಾಡಿದ್ದರು. ಚಂದ್ರನ ಮೇಲೆ ಲ್ಯಾಂಡ್ ಆಗಬೇಕಾಗಿದ್ದ ಉಪಗ್ರಹ ಕೊನೇ ಕ್ಷಣದಲ್ಲಿ ವಿಫಲವಾಗಿತ್ತು. ಈ ಬಗ್ಗೆ ಪಾಕಿಸ್ತಾನ ಟ್ರೋಲ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರತವನ್ನು ಹೀಯಾಳಿಸಿ ಪೋಸ್ಟ್ ಮಾಡಲಾಗುತ್ತಿದೆ.

ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡು ಇಸ್ರೋ ವಿಜ್ಞಾನಿಗಳ ಸತತ ಪ್ರಯತ್ನದ ನಡುವೆಯೂ ಸಂಪರ್ಕ ಸಿಗದ ಬಗ್ಗೆ ನಿನ್ನೆ ಮಧ್ಯರಾತ್ರಿ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಕೇಂದ್ರ ವಿಜ್ಞಾನ ಸಚಿವ ಫವಾದ್ ಹುಸೇನ್ IndiaFailed ಎಂಬ ಹ್ಯಾಶ್​ಟ್ಯಾಗ್ ಮೂಲಕ ಟ್ರೋಲ್ ಮಾಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ಯಾಟಲೈಟ್ ಕಮ್ಯುನಿಕೇಷನ್ ಬಗ್ಗೆ ಭಾಷಣ ಮಾಡುವುದನ್ನು ನೋಡಿದರೆ ಅವರು ರಾಜಕಾರಣಿಯೋ ಅಥವಾ ಗಗನಯಾತ್ರಿಯೋ ಎಂಬ ಅನುಮಾನ ಮೂಡುತ್ತದೆ. ಬಡ ರಾಷ್ಟ್ರದ ಜನರ 900 ಕೋಟಿ ರೂ. ಹಣವನ್ನು ದುಂದುವೆಚ್ಚ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಲ್ಲಿ ಲೋಕಸಭೆ ಲೆಕ್ಕ ಕೇಳಲಿ ಎಂದು ಪಾಕ್ ಸಚಿವ ಲೇವಡಿ ಮಾಡಿದ್ದಾರೆ.

ಇದಕ್ಕೆ ಭಾರತೀಯ ಟ್ವಿಟ್ಟಿಗರು ತಿರುಗೇಟು ನೀಡಿದ್ದು, ನಾವು ಇಸ್ರೋ ಚಂದ್ರಯಾನಕ್ಕೆ ಇಟ್ಟ ಹಣ ಪಾಕಿಸ್ತಾನದ ಬಜೆಟ್​ಗಿಂತಲೂ ಹೆಚ್ಚಿದೆ. ಅಂಥವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಟಾಂಟ್ ನೀಡಿದ್ದಾರೆ.

ಭಾರತ ಚಂದ್ರನ ಮೇಲೆ ನೀರಿದೆ ಎಂದು ಕಂಡುಹಿಡಿದಿದೆ. ಆದರೆ, ಪಾಕಿಸ್ತಾನವಿನ್ನೂ ಚಂದ್ರ ಎಲ್ಲಿದ್ದಾನೆ ಎಂದು ಹುಡುಕುವುದರಲ್ಲೇ ನಿರತವಾಗಿದೆ ಎಂದು ಭಾರತೀಯರು ಲೇವಡಿ ಮಾಡಿದ್ದಾರೆ.

Comments are closed.