
ನವದೆಹಲಿ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಮತ್ತು ಅತ್ಯಾಚಾರ ಆರೋಪಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಭಕ್ತನೊಬ್ಬ ಚಾಕು ಹಿಡಿದು ಸಂಸತ್ತಿಗೆ ಪ್ರವೇಶಿಸುವಾಗ ಪೋಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸಾಗರ್ ಇನ್ಶಾ ಎಂದು ಗುರುತಿಸಲಾಗಿದ್ದು ದೆಹಲಿಯ ಲಕ್ಷ್ಮಿ ನಗರ ನಿವಾಸಿ. ಎನ್ನಲಾಗಿದೆ.
ಸಂಸತ್ತಿನ ಭದ್ರತಾ ಸಿಬ್ಬಂದಿ ಚಾಕು ಹಿಡಿದು ನುಗ್ಗಲು ಯತ್ನಿಸಿದ್ದ ಸಾಗರ್ ನನ್ನು ವಶಕ್ಕೆ ಪಡೆದಿದ್ದಾರೆ.
ಸಂಸತ್ತಿನ ಗೇಟ್ ನಂಬರ್ 1 ಮೂಲಕ ದ್ವಿಚಕ್ರ ವಾಹನದಲ್ಲಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಧ್ಯ ಆತನನ್ನು ಸಂಸತ್ತಿನ ರಸ್ತೆಯಲ್ಲಿರುವ ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದುಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಆತನನ್ನು ವಿಚಾರಣೆ ನದೆಸುತ್ತಿದೆ..
Comments are closed.