ರಾಷ್ಟ್ರೀಯ

ಐಸಿಯೂನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 50 ವರ್ಷದ ವಾರ್ಡ್ ಬಾಯ್

Pinterest LinkedIn Tumblr

ಹೈದರಾಬಾದ್: ಐಸಿಯೂನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 30 ವರ್ಷದ ಮಹಿಳೆಯ ಮೇಲೆ 50 ವರ್ಷದ ವಾರ್ಡ್ ಬಾಯ್ ಲೈಂಗಿಕ ದೌರ್ಜನ್ಯವೆಸಗಿ ಹೀನ ಕೃತ್ಯ ನಡೆಸಿದ್ದಾನೆ.

ಡೆಲಿವರಿ ಸಮಯದಲ್ಲಿ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಕೆಯನ್ನು ವೆಂಟಿಲೇಟರ್ ನಲ್ಲಿಡಲಾಗಿತ್ತು. ಐಸಿಯುನಲ್ಲಿ ಯಾರು ಇಲ್ಲದ ಸಮಯದಲ್ಲಿ ಕೈಯಲ್ಲಾಗದ ನಿತ್ರಾಣಗೊಂಡಿದ್ದ ಮಹಿಳೆಯ ಮೇಲೆ 50 ವರ್ಷದ ಅಚ್ಯುತ್ ರಾವ್ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

ಕಳೆದ ಆಗಸ್ಟ್ 26ರಂದು ಈ ಕೃತ್ಯ ನಡೆದಿದ್ದು ಮಹಿಳೆ ಸಂಪೂರ್ಣವಾಗಿ ಚೇತರಿಸಿಕೊಂಡು ನಂತರ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಪೋಷಕರು ಬಂಜಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.