
ಅಹಮದಾಬಾದ್: ಪತಿ ಮೇಲಿನ ಕೋಪಕ್ಕೆ ಮಹಿಳೆಯೊಬ್ಬರು ಎರಡು ವರ್ಷದ ಮಗನ ಕುತ್ತಿಗೆ ಸೀಳಿ, ಕೊನೆಗೆ ತಾವೂ ನೇಣಿಗೆ ಶರಣಾದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ
ನೇಪಾಳ ಮೂಲದ ಶಾಂತಿಬೆನ್ ಸೋನಾರ್ ಆತ್ಮಹತ್ಯೆಗೆ ಶರಣಾದ ಮಹಿಳೆ. ತನ್ನ ಪತಿ ಹಾಗೂ ಮಗುವಿನೊಂದಿಗೆ ಅಹಮದಾಬಾದಿನಲ್ಲಿ ಮಹಿಳೆ ವಾಸವಿದ್ದರು. ನೇಪಾಳದಲ್ಲಿನ ತಮ್ಮ ಊರು ಕಂಚನ್‍ಪುರಕ್ಕೆ ಮರಳಿ ಕರೆದೊಯ್ಯುವುದಾಗಿ ಪತಿ ಯಾವಾಗಲೂ ಹೇಳುತ್ತಿದ್ದರು. ಆದರೆ ಇದು ಬರೀ ಮಾತಿಗೆ ಮಾತ್ರ ಸೀಮಿತವಾಗಿತ್ತೆ ಹೊರತು, ಊರಿಗೆ ಮರಳಿ ಕರೆದೊಯ್ಯಲಿಲ್ಲ.
ಯಾವಾಗಲೂ ಬರೀ ಮಾತು, ಯಾವುದನ್ನು ಮಾಡಲ್ಲ ಎಂದು ಪತಿ ಮೇಲೆ ಮಹಿಳೆ ಕೋಪಗೊಂಡಿದ್ದರು. ಪದೇ ಪದೇ ಪತಿ ಸುಳ್ಳು ಮಾತನ್ನು ಕೊಡುತ್ತಾರೆ. ಸುಳ್ಳು ಹೇಳುತ್ತಾರೆ ಎಂಬ ಸಿಟ್ಟಿನಿಂದ ಪತ್ನಿ ಮನೆಯಲ್ಲಿ ತಮ್ಮ ಮಗನ ಕುತ್ತಿಗೆ ಸೀಳಿ, ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
Comments are closed.