
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಏರಿಸುವ ಮಹತ್ವದ ಗುರಿ ಹೊಂದಿದ್ದು ಆದರೆ ಅದನ್ನು ಸಾಧಿಸುವ ಧೈರ್ಯ ಮತ್ತು ಜ್ಞಾನ ಎರಡೂ ಇಂದು ನಮ್ಮಲ್ಲಿಲ್ಲ ಎಂದು ಬಿಜೆಪಿ ರಾಜ್ಯಸಭಾ ಎಂಪಿ ಸುಬ್ರಮಣಿಯನ್ ಸ್ವಾಮಿ ಖಡಕ್ ಟ್ವೀಟ್ ಮಾಡಿದ್ದಾರೆ.
5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಕುರತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದರು. ಅಲ್ಲದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಕೇಂದ್ರ ಬಜೆಟ್ ವೇಳೆ ಇದನ್ನೇ ಹೇಳಿದ್ದರು.
Get ready to say good bye to ₹ 5 trillion if no new economic policy is forthcoming. Neither boldness alone or knowledge alone can save the economy from a crash. It needs both. Today we have neither
— Subramanian Swamy (@Swamy39) August 31, 2019
ಭಾರತದ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದೆ. ಎಷ್ಟೇ ಕ್ರಮಗಳನ್ನು ಕೈಗೊಂಡರು ಆರ್ಥಿಕತೆ ಪುನರ್ ಚೇತನಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ವೊಂದನ್ನು ಮಾಡಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸಿನ ಮಾತು ಎಂದು ಹೇಳಿದ್ದಾರೆ.
ಕಳೆದ ಆರು ವರ್ಷಗಳಲ್ಲೇ ಜಿಡಿಪಿ ದರ ಕನಿಷ್ಠ ಶೇ. 5ಕ್ಕೆ ಕುಸಿದಿದೆ. ಇದು ಹೀಗೆ ಮುಂದುವರೆದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸದೆ ಹೋದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಗುಡ್ ಬೈ ಹೇಳಲು ಸಿದ್ಧರಾಗಬೇಕಾಗುತ್ತದೆ ಎಂದರು.
ಬರೀ ಧೈರ್ಯ ಮತ್ತು ದಿಟ್ಟತನವಿದ್ದರೆ ಆರ್ಥಿಕ ಕುಸಿತವನ್ನು ತಡೆಗಟ್ಟಲು ಸಾಧ್ಯವಿಲ್ಲ. ಧೈರ್ಯ ಮತ್ತು ಜ್ಞಾನ ಎರಡೂ ಬೇಕಾಗುತ್ತದೆ. ಆದರೆ ಆ ಎರಡೂ ಇಂದು ನಮ್ಮಲ್ಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
Comments are closed.