ಕರಾವಳಿ

ಸೆ 2ರಿಂದ 4 : ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Pinterest LinkedIn Tumblr

ಮಂಗಳೂರು : ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಂಕಾರ ನಗರ ಬಂಟ್ಸ್‌ಹಾಸ್ಟೆಲ್ ಇದರ 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.1ರಿಂದ 4ರವರೆಗೆ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ಜರಗಲಿದೆ
ಎಂದು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಮತ್ತು ತಾಲೂಕು ಬಂಟರ ಸಂಘ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಬಂಟರ ಮಾತೃ ಸಂಘ ಹಾಗೂ ದ.ಕ, ಉಡುಪಿ, ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಇತರ ಸಂಘ- ಸಂಸ್ಥೆಗಳ ಹಾಗೂ ಎಲ್ಲಾ ಜಾತಿ-ಮತ ಬಾಂಧವರ ಸಹಕಾರದೊಂದಿಗೆ ಶ್ರದ್ಧಾ ಭಕ್ತಿಯೊಂದಿಗೆ ಜರಗಲಿದೆ ಎಂದು ಹೇಳಿದರು.

ಸೆ.1ರಂದು ಬಾನುವಾರ ಅಪರಾಹ್ನ 4ಗಂಟೆಯಿಂದ ಹತ್ತನೇ ತರಗತಿವರೆಗಿನ ಮಕ್ಕಳ ಚಿತ್ರಕಲಾ ಸ್ಫರ್ಧೆಯು ಸಾರ್ವಜನಿಕರಿಗೆ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಅವರಣದಲ್ಲಿ ನಡೆಯಲಿರುವುದು. ಬಳಿಕ ಸಂಜೆ 5ಗಂಟೆಗೆ ಶರವು ದೇವಸ್ಥಾನದ ಬಳಿ ಇರುವ ಶ್ರೀ ರಾಧಾಕೃಷ್ಣ ದೇವಸ್ಥಾನದಿಂದ ಪ್ರಾರ್ಥನೆ ಮಾಡಿ ಶ್ರೀ ಸಿದ್ಧಿ ವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರಕ್ಕೆ ಬರಮಾಡಿಕೊಳ್ಳಲಾಗುವುದು. ಸಂಜೆ ೬.೩೦ರಿಂದ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ವಾಮಂಜೂರು ಇವರಿಂದ ಯಕ್ಷಗಾನ ಕಲಾಸೇವೆಯು ನಡೆಯಲಿರುವುದು.

ಸೆ.2ರಂದು ಸೋಮವಾರ ಬೆಳಿಗ್ಗೆ ೮ ಗಂಟೆಗೆ ಸ್ಥಳ ಶುದ್ಧಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ, ಬಳಿಕ ಧ್ವಜಾರೋಹಣ, ಮೂರ್ತಿ ಪ್ರತಿಷ್ಠೆ, ಗಣಹೋಮ, ತೆನೆ ಹಬ್ಬ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ.೯.೩೦ರಿಂದ ತೆನೆ ವಿತರಣೆ, ೧೦.೩೦ರಿಂದ ಸಿತಾರ್ ಮಾಂತ್ರಿಕ ಶ್ರೀ ಕೊಚ್ಚಿಕಾರ್ ದೇವದಾಸ್ ಪೈಯವರಿಂದ ಭಕ್ತಿಗೀತೆಗಳು, ೧೧.೩೦ರಿಂದ ಭಜನಾ ಸೇವೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅಪರಾಹ್ನ ೨.೩೦ರಿಂದ ಬಂಟ ಸಮಾಜ ಬಾಂಧವರಿಂದ ಭಾರತೋತ್ಸವ ಕಾರ್ಯಕ್ರಮಗಳು ಜರಗಲಿರುವುದು.

ಸಂಜೆ ೫ ರಿಂದ ೭ರವರೆಗೆ ಧಾರ್ಮಿಕ ಸಭೆ ನಡೆಯಲಿರುವುದು. ೭.೩೦ರಿಂದ ರಂಗಪೂಜೆ, ಮಹಾಪೂಜೆ ನಡೆಯುವುದು. ರಾತ್ರಿ ೮ ರಿಂದ ಸಮಾಜ ಬಾಂಧವರಿಂದ ಭಾರತೋತ್ಸವ ಕಾರ್ಯಕ್ರಮಗಳು ಮುಂದುವರಿಯುವುದು.

ಸೆ.೩ರಂದು ಬೆಳಗ್ಗೆ ೯ರಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ ೪ ಗಂಟೆಗೆ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣ ಯಾಗದ ಅಂಗವಾಗಿ ಋತ್ವಿಜರಿಂದ ಯಾಗಶಾಲೆ ಪ್ರವೇಶ, ಗಣಪತಿ ಪೂಜೆ, ಭೂಶುದ್ಧಿ, ವಾಸ್ತುರಾಕ್ಷೋಘ್ನ ಹವನ ನಡೆಯಲಿರುವುದು.ರಾತ್ರಿ ಗಂಟೆ 8 ರಿಂದ ನೃತ್ಯೋತ್ಸವ ಮುಂದುವರಿಯುವುದು.

ಸೆ.೪ರಂದು ೮.೩೦ರಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣ ಯಾಗ ಮುಂದುವರಿದು, 11 ಗಂಟೆಗೆ ಮಹಾಗಣಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ೧೨,.೩೦ರಿಂದ ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ ೧ರಿಂದ ಬಂಟರ ಯಾನೆ ನಾಡವರ ಮಾತೃ ಸಂಘದ ಭಜನಾ ಮಂಡಳಿಯಿಂದ ಭಜನಾ ಸೇವೆ, ಅಪರಾಹ್ನ 3:15ಕ್ಕೆ ವಿಸರ್ಜನೆ ಪೂಜೆ ಅಪರಾಹ್ನ ೩.೩೦ರಿಂದ ಭಜನಾ ತಂಡಗಳ ಭಜನಾ ಸೇವೆಯೊಂದಿಗೆ ಶೋಭಾಯಾತ್ರೆ ಪ್ರಾರಂಭವಾಗುವುದು ಎಂದುದು ಅಜಿತ್ ಕುಮಾರ್ ರೈ ಮಾಲಾಡಿ ಅವರು ಕಾರ್ಯಕ್ರಮದ ಕುರಿಯು ಸಮಗ್ರ ಮಾಹಿತಿ ನೀಡಿದರು.

ಸೆ.೨ರಿಂದ ೪ರವರೆಗೆ ನಡೆಯುವ ಮೂರು ದಿನಗಳ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರತಿ ವರುಷದಂತೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಉದ್ಯಮ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಾಂಧವರನ್ನು ಗೌರವಿಸಿ ಸತ್ಕರಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಜಿತ್ ಕುಮಾರ್ ರೈ ಮಾಲಾಡಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಚಾಲಕಿ ಡಾ.ಆಶಾಜ್ಯೋತಿ ರೈ,ಬಂಬ್ರಾಣ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಮಂಜುನಾಥ ಭಂಡಾರಿ ಶೆಡ್ಯೆ, ಕೃಷ್ಣಪ್ರಸಾದ್ ರೈ ಬೆಳ್ಳಿಪಾಡಿ, ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಕೋಶಾಧಿಕಾರಿ ಉಮೇಶ್ ರೈ ಮೇಗಿನಮನೆ ಮುಂತಾದವರು ಉಪಸ್ಥಿತರಿದ್ದರು.

Comments are closed.