ರಾಷ್ಟ್ರೀಯ

ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ಪ್ರಧಾನಿ ಮೋದಿ ಹೇಳಿದ್ದೇನು…?

Pinterest LinkedIn Tumblr

ಮೊದಲು ಆರೋಗ್ಯದಿಂದ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತಿದ್ದವು, ಈಗ ಸ್ವಾರ್ಥದಿಂದ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತಿವೆ, ಸ್ವಾರ್ಥ ಮನೋಭಾವನೆ ಸ್ವಾಸ್ಥ್ಯ ಮನೋಭಾವನೆಯಾಗಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಆ.29 ರಂದು ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂ ಸಂಕೀರ್ಣದಲ್ಲಿ ಕ್ರೀಡಾ ಸಚಿವಾಲಯ ಆಯೋಜಿಸಿದ್ದ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ನವಭರತದ ನಾಗರಿಕರು ಸದೃಢರಾಗುವತ್ತ ಗಮನಹರಿಸಬೇಕು, ಸ್ವಾರ್ಥ ಮನೋಭಾವ ಸ್ವಾಸ್ಥ್ಯ ಮನೋಭಾವವಾಗಬೇಕೆಂದು ಕರೆ ನೀಡಿದ್ದಾರೆ.

“ತಂತ್ರಜ್ಞಾನ ಬಂದ ನಂತರ ದೈಹಿಕ ಚಟುವಟಿಕೆಗಳು ಕಡಿಮೆಯಾಗಿದೆ ಎಂದು ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ. ಕ್ರೀಡೆ ಫಿಟ್ನೆಸ್ ನೊಂದಿಗೆ ನೇರವಾದ ಸಂಬಂಧ ಹೊಂದಿದೆ. ಕ್ರೀಡಾಪಟುಗಳು ಪಡೆಯುವ ಮೆಡಲ್ ಭಾರತಕ್ಕೆ ಹೆಮ್ಮೆಯ ಸಂಗತಿ, ನವಭರತದ ನಾಗರಿಕರು ಸದೃಢರಾಗುವತ್ತ ಗಮನಹರಿಸಲಿ ಎಂದು ಮೋದಿ ಹೇಳಿದ್ದಾರೆ.

Comments are closed.