ಕರಾವಳಿ

ಚಂದ್ರನ ನಿಜವಾದ ಬಣ್ಣ ಯಾವುದು ಬಲ್ಲಿರಾ..!

Pinterest LinkedIn Tumblr

ಚಂದ್ರನ ಬಗ್ಗೆ ಒಂದು ಆಶ್ಚರ್ಯಕರ ಸುದ್ಧಿ ಇಲ್ಲಿದೆ ಚಂದ್ರನ ಬಣ್ಣ ಬೇರೆಯದ್ದೇ ಆಗಿದೆ ಅದು ಏನಿದು ತಿಳಿಯೋಣ ಬನ್ನಿ. ಕತ್ತಲಾಗಿದೆ ಎಂದರೆ ಆಕಾಶದಲ್ಲಿ ಫಳಫಳ ಹೊಳೆಯುವನು ಚಂದ್ರ ಆ ಚಂದ್ರ ಚಿಕ್ಕ ಮಕ್ಕಳಿಗೆ ಚಂದಮಾಮ ಅವನನ್ನು ತೋರಿಸಿ ಮಕ್ಕಳಿಗೆ ಊಟ ಮಾಡಿಸುವ ರೂಢಿ ಮೊದಲಿನಿಂದಲೂ ಇದೆ. ಚಂದ್ರನ ಬಣ್ಣಕ್ಕೆ ಮಕ್ಕಳು ಆಕರ್ಷಿತರಾಗುತ್ತಾರೆ ಏಕೆಂದರೆ ಚಂದ್ರನ ಬಣ್ಣವೇ ಹಾಗಿದೆ ಅದು ತಿಳಿ ಹಾಲಿನ ಕಣ್ಣಿಗೆ ಕುಕ್ಕುವಂತಹ ಬಿಳಿ ಬಣ್ಣ ಹೌದು ಸ್ನೇಹಿತರೆ ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಚಂದ್ರನ ಬಣ್ಣ ಬಿಳಿ, ಆದರೆ ಈಗ ಆ ಬಣ್ಣವೇ ಎಲ್ಲರಿಗೂ ಸಹ ಆಶ್ಚರ್ಯ ಉಂಟುಮಾಡಿದೆ ಅದೇನು ತಿಳಿಯೋಣ ಬನ್ನಿ. ಚಂದ್ರ ಉಪಗ್ರಹ ವಿಜ್ಞಾನಿಗಳ ಪಾಲಿಗೆ ಒಂದು ಗ್ರಹವಾಗಿದ್ದರು ಮಕ್ಕಳ ಪಾಲಿಗೆ ಒಂದು ಚಂದಮಾಮ ಮೊನ್ನೆಯಷ್ಟೇ ನಮ್ಮ ಭಾರತೀಯ ವಿಜ್ಞಾನಿಗಳು ಚಂದ್ರಯಾನ 2 ಮೂಲಕ ಯಶಸ್ವಿ ಪ್ರಯಾಣ ಶುರುಮಾಡಿದ್ದಾರೆ ಅದರಂತೆ ಆಗಸ್ಟ್ 22 ನೇ ತಾರೀಖು ಚಂದ್ರಯಾನ 2 ಇಸ್ರೋ ಸಂಸ್ಥೆ ಚಂದ್ರಯಾನ 2 ಫೋಟೋವೊಂದನ್ನು ಬಿಡುಗಡೆ ಮಾಡಿದೆ

ಆ ಫೋಟೋ ನೋಡಿದ ಜನ ತ್ರಿಲ್ ಆಗಿದ್ದೇನೋ ನಿಜ ಆದರೆ ಚಂದಮಾಮನ ಕಥೆ ಕೇಳಿ ಬೆಳೆದವರಿಗೆಲ್ಲ ಒಂದು ಪ್ರಶ್ನೆ ಎದುರಾಗಿದೆ ಅದೇನೆಂದರೆ ನಾವು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿರುವ ಚಂದಮಾಮ ಹಾಲಿನಷ್ಟೇ ಬೆಳ್ಳಗಿದ್ದಾನೆ ಆದರೆ ಇಸ್ರೋ ಬಿಡುಗಡೆ ಮಾಡಿದ ಚಂದ್ರಗ್ರಹ ಬೆಳ್ಳಗಿಲ್ಲ ಹೌದು ಇಸ್ರೋ ಬಿಡುಗಡೆಗೊಳಿಸಿದ ಆ ಒಂದು ಫೋಟೋನೆ ಅನೇಕ ಮಂದಿಯ ಕುತೂಹಲಕ್ಕೆ ಕಾರಣವಾಗಿದೆ ಇದರಿಂದ ಚಂದ್ರನ ಬಣ್ಣ ಯಾವುದು ಎಂದು ಅನುಮಾನವಾಗಿದೆ. ಅದರಂತೆ ರಾತ್ರಿಯಾಗುತ್ತಲೇ ಇಡೀ ಜಗತ್ತಿಗೆ ಕತ್ತಲು ಕವಿಯುತ್ತದೆ ಆದರೆ ಚಂದ್ರ ಮಾತ್ರ ಹೊಳೆಯುತ್ತಿರುತ್ತಾನೆ. ಚಂದ್ರ ಬೆಳ್ಳಗೆ ಕಾಣುವದಷ್ಟೇ ಅಲ್ಲ ಸುಂದರ ಹಾಗೂ ಆಕರ್ಷಿಕನಾಗಿರುತ್ತಾನೆ. ಆದರೆ ಚಂದಮಾಮ ನಾವು ಅಂದುಕೊಂಡಷ್ಟು ಸುಂದರವಾಗಿಲ್ಲ ಅನ್ನುವ ಸಂದೇಹ ಶುರುವಾಗಿದೆ.

ಅಂದಹಾಗೆ ಇಸ್ರೋ ಸಂಸ್ಥೆಯ ಚಂದ್ರಯಾನ 2 ಗಗನ ನೌಕೆಯಲ್ಲಿರುವ ವಿಕ್ರಮ್ ಲ್ಯಾನ್ಡರ್ ಆಗಸ್ಟ್ 21 ನೇ ತಾರೀಖು ಚಂದ್ರನ ಮೊಟ್ಟ ಮೊದಲ ಫೋಟೋವೊಂದನ್ನು ಸೆರೆಹಿಡಿಯಲಾಗಿದೆ ಚಂದ್ರನಿಂದ ಸುಮಾರು 2650 ಕಿಲೋಮೀಟರ್ ದೂರದಿಂದ ಆ ಚಿತ್ರವನ್ನು ಸೆರೆಹಿಡಿಯಲಾಗಿದೆ. ಆ ಚಿತ್ರದಲ್ಲಿ ಚಂದ್ರನ ಮೇಲಿರುವ ಅಪೋಲೊ ಕುಳಿಗಳನ್ನು ಕೂಡ ಗುರುತಿಸಬಹುದು ಎಂದು ಇಸ್ರೋ ಸಂಸ್ಥೆ ತಿಳಿಸಿದೆ ಆ ಫೋಟೋದಲ್ಲಿ ಚಂದ್ರನ ಬೂದು ಬಣ್ಣ ಕೂಡ ಕಾಣಿಸುತ್ತದೆ. ಆ ಫೋಟೋದಲ್ಲಿ ಚಂದ್ರ ಭೂಮಿಯಿಂದ ಕಾಣುವ ಹಾಗೆ ಬೆಳ್ಳಗಿಲ್ಲ ಇದಕ್ಕೂ ಇಂಟರೆಸ್ಟಿಂಗ್ ವಿಷಯ ಏನೆಂದರೆ.ಭೂಮಿಯ ಏಕೈಕ ಪ್ರಾಕೃತಿಕ ಉಪಗ್ರಹ ಚಂದ್ರ. ಆದರೆ ಚಂದ್ರನಲ್ಲಿ ಬೆಳಕು ಹರಿಸುವಂತ ಯಾವುದೇ ಪ್ರಾಕೃತಿಕ ಶಕ್ತಿ ಇಲ್ಲ ಜೊತೆಗೆ ಅಲ್ಲಿ ಯಾವುದೇ ಆಕರ್ಷಕ ಬೆಳಕು ಕೂಡ ಇಲ್ಲ ಭೂಮಿ ಹೇಗೆ ಸೂರ್ಯನ ಸುತ್ತ ನಿತ್ಯ ಪರಿಕ್ರಮಿಸುತ್ತದೆಯೋ ಅದೇ ರೀತಿಯಲ್ಲಿ ಚಂದ್ರ ಉಪಗ್ರಹ ಕೂಡ ಭೂಮಿಯ ಸುತ್ತಲೂ ಸುತ್ತುತ್ತ ಇರುತ್ತೆ.

ಇದೆ ಕಾರಣಕ್ಕೆ ಭೂಮಿಯಿಂದ ಸಂಪೂರ್ಣ ಚಂದ್ರನನ್ನು ನೋಡಲು ಸಾಧ್ಯವಾಗುವುದಿಲ್ಲ ಚಂದ್ರನಲ್ಲಿ ಯಾವುದೇ ವಾತವರಣವಿಲ್ಲದ ಕಾರಣ ರಾತ್ರಿಯಾಗುತ್ತಲೇ ಸೂರ್ಯನ ಕಿರಣಗಳು ಚಂದ್ರನ ಮೇಲೆ ಬೀಳುತ್ತವೆ ಆ ಸೂರ್ಯಕಿರಣಗಳ ಬೆಳೆಕಿನಿಂದ ಚಂದ್ರನ ಮೇಲ್ಮೈ ಫಳಫಳನೆ ಹೊಳೆಯುತ್ತದೆ.ಭೂಮಿಯ ಮೇಲೆ ಕತ್ತಲೆ ಕವಿಯುತ್ತಲೇ ಚಂದ್ರ ಬೆಳ್ಳಗೆ ಹಾಲಿನಷ್ಟು ಆಕರ್ಷಕವಾಗಿ ಕಾಣುತ್ತದೆ ಒಮ್ಮೊಮ್ಮೆ ನೀಲಿ ಬಣ್ಣದ ಕಂಗೊಳಿಸುತ್ತದೆ ಅಷ್ಟೇ ಅಲ್ಲದೆ ಸೂರ್ಯನ ಕಿರಣಗಳಿಂದಲೇ ಚಂದ್ರ ಒಮ್ಮೆ ಬೃಹದ್ದಾಗಿ ಕಾಣುತ್ತದೆ ಮತ್ತೊಮ್ಮೆ ಚಿಕ್ಕದಾಗಿ ಕಾಣುತ್ತದೆ. ಯಾವಾಗ ಚಂದ್ರ ಹಾಗೂ ಸೂರ್ಯನ ನಡುವೆ ಭೂಮಿ ಬರುತ್ತದೆಯೋ ಆಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರಗ್ರಹಣವಾಗುತ್ತದೆ ಚಂದ್ರಯಾನ 2 ಒಂದು ಫೋಟೋ ರಿವಿಲ್ ಮಾಡಿದ್ದಕ್ಕೆ ಇಷ್ಟೆಲ್ಲ ಅಂಶಗಳು ಬಯಲಾಗಿವೆ ಇನ್ನು ಪೂರ್ತಿ ಮುಗಿಯುವುದರಲ್ಲಿ ಯಾವೆಲ್ಲ ಅಂಶಗಳು ಹೊರಬೀಳುತ್ತೋ ಅನ್ನೋ ಅಂಶವನ್ನ ಕಾದುನೋಡೋಣ …

Comments are closed.