ರಾಷ್ಟ್ರೀಯ

ತ್ರಿವಳಿ ತಲಾಖ್‌ ಸಂಬಂಧ 217 ದೂರು ದಾಖಲು!

Pinterest LinkedIn Tumblr


ಲಕ್ನೋ: ಏಕಕಾಲಕ್ಕೆ 3 ಬಾರಿ ತಲಾಖ್‌ ಹೇಳುವಂಥ ತ್ರಿವಳಿ ತಲಾಖ್‌ ಪದ್ಧತಿ ಶಿಕ್ಷಾರ್ಹ ಅಪರಾಧ ಎಂದು ಕಾನೂನು ಜಾರಿಯಾಗುತ್ತಲೇ ಈ ಪದ್ಧತಿ ವಿರುದ್ಧ ಧ್ವನಿಯೆತ್ತುವವರು ಹೆಚ್ಚಾಗಿದ್ದಾರೆ. ಉತ್ತರ ಪ್ರದೇಶ ರಾಜ್ಯವೊಂದರಲ್ಲಿಯೇ ಇದುವರೆಗೆ 216 ಎಫ್ಐಆರ್‌ಗಳು ದಾಖಲಾಗಿವೆ.

ಮೀರತ್‌ ಜಿಲ್ಲೆಯಲ್ಲಿ 26, ಸಹರಾನ್ಪುರದಲ್ಲಿ 17, ಶಾಮ್ಲಿಯಲ್ಲಿ 10 ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಂಗಳವಾರ ಹೇಳಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಈ ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಾಗಿಯೇ ಇದೆ. ವಾರಾಣಸಿಯಲ್ಲಿ ಹತ್ತು ಕೇಸುಗಳು ದಾಖಲಾಗಿವೆ.

ತ್ರಿವಳಿ ತಲಾಖ್‌ಗೆ ಆಸ್ತಿ ವಿವಾದ, ವರದಕ್ಷಿಣೆ ಮತ್ತು ಕಿರುಕುಳಗಳೇ ಪ್ರಮುಖ ಕಾರಣ. 216 ಎಫ್ಐಆರ್‌ ದಾಖಲಾಗಿದ್ದರೂ, 2-3 ಕೇಸುಗಳಲ್ಲಿ ಮಾತ್ರ ದಸ್ತಗಿರಿ ಮಾಡಲಾಗಿದೆ. ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ದಾಖಲಿಸಿರುವ ದೂರನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಬಂಧನ ನಡೆಸಬೇಕೋ ಬೇಡವೋ ಎಂದು ಪರಿಶೀಲನೆ ನಡೆಸಲಾಗುತ್ತದೆ ಎಂದು ಉತ್ತರ ಪ್ರದೇಶ ಡಿಜಿಪಿ ಓ.ಪಿ.ಸಿಂಗ್‌ ಹೇಳಿದ್ದಾರೆ.

Comments are closed.