ರಾಷ್ಟ್ರೀಯ

ಮನ್​​ ಕಿ ಬಾತ್​​: ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಮೋದಿ ಕರೆ

Pinterest LinkedIn Tumblr


ನವದೆಹಲಿ(ಆಗಸ್ಟ್​​.25): ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನವನ್ನು ‘ಪ್ಲಾಸ್ಟಿಕ್ ಮುಕ್ತ ಭಾರತ’ ಧ್ಯೇಯದೊಂದಿಗೆ ಆಚರಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಬಹುನಿರೀಕ್ಷಿತ ‘ಮನ್‌ ಕಿ ಬಾತ್‌’ನ (ಮನದ ಮಾತು) ಕಾರ್ಯಕ್ರಮದಲ್ಲಿ ಮಾತಾಡಿರುವ ಪ್ರಧಾನಿ, ಪ್ಲಾಸ್ಟಿಕ್ ತಾಜ್ಯದ ವಿರುದ್ಧ ಆಂದೋಲನಕ್ಕೆ ಕೈಜೋಡಿಸುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ಇದರ ವಿಲೇವಾರಿಗೆ ಲಭ್ಯವಾಗಿರುವ ಮಾರ್ಗಗಳ ಪಟ್ಟಿ ನೀಡುವಂತೆ ನಗರಸಭೆಗೆ ಸೂಚಿಸಿದ್ದಾರೆ.

ಇದೇ ಅಕ್ಟೋಬರ್ 2ಕ್ಕೆ ಗಾಂಧೀಜಿ ಜಯಂತಿ. ಇವರ ಜನ್ಮದಿನದಂದೇ ಪ್ಲಾಸ್ಟಿಕ್​​ ಮುಕ್ತ ಭಾರತದತ್ತ ಹೆಜ್ಜೆ ಹಾಕುವ ಪಣತೊಡೋಣ. ಹೀಗಾಗಿ ಈಗಿನಿಂದಲೇ ಪ್ಲಾಸ್ಟಿಕ್ ಬಳಕೆ ವಿರುದ್ಧ ಹೊಸ ಜನಾಂದೋಲನ ಶುರು ಮಾಡಬೇಕಿದೆ. ಈ ಮೂಲಕ ‘ಪ್ಲಾಸ್ಟಿಕ್ ಮುಕ್ತ ಭಾರತ’ ನಿರ್ಮಿಸೋಣ ಎಂದರು.

ಜಿಲ್ಲಾಡಳಿತ, ಸರ್ಕಾರೇತರ ಸಂಸ್ಥೆಗಳು ಈ ಆಂದೋಲನಕ್ಕೆ ಕೈಜೋಡಿಸಬೇಕಿದೆ. ಪ್ಲಾಸ್ಟಿಕ್ ಮರುಬಳಕೆ ಬಗ್ಗೆ ಕಾರ್ಪೊರೇಟ್ ಸಂಸ್ಥೆಗಳು ಏನದರೂ ಸಲಹೆ ನೀಡಬಹುದಾಗಿದೆ. ಇದರಿಂದ ನಾವು ಹಣಕಾಸಿನ ಉಳಿತಾಯದ ಜತೆಗೆ ಪರಿಸರ ಉಳಿಸಬಹುದು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಸೆಪ್ಟೆಂಬರ್ 11ರಿಂದಲೇ ಈ ಆಂದೋಲನ ಆರಂಭವಾಗಲಿದೆ. ನೀವು ಕೂಡ ಸರ್ಕಾರದ ‘ಸ್ವಚ್ಛತೆಯೇ ಸೇವೆ’ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.

ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಅಕ್ಟೋಬರ್​ 2ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ಮಾಹಿತಿ ನೀಡಿದರು. “ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ. ಈ ಬಾರಿ ನಾವು ಕೇವಲ ಬಯಲು ಮುಕ್ತ ಶೌಚಾಲಯ ಮಾಡುವುದು ಮಾತ್ರವಲ್ಲ, ಪ್ಲಾಸ್ಟಿಕ್​ ಮುಕ್ತ ರಾಷ್ಟ್ರವನ್ನಾಗಿ ಮಾಡಬೇಕಿದೆ,” ಎಂದು ಕರೆ ನೀಡಿದರು.

Comments are closed.