ಕರ್ನಾಟಕ

ಮಹಾರಾಷ್ಟ್ರದಿಂದ ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ! ಆಲಮಟ್ಟಿ ಪ್ರವಾಹಸ್ಥಿತಿ!!

Pinterest LinkedIn Tumblr


ಕೃಷ್ಣಾ ನದಿ ಪ್ರವಾಹದಿಂದ ವಿಜಯಪುರದ ಅಲಮಟ್ಟಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಬರ್ತಿದೆ. ಮಹಾರಾಷ್ಟ್ರದಿಂದ ಸುಮಾರು 6 ಲಕ್ಷ ಕ್ಯೂಸೆಕ್​​​​ನಷ್ಟು ನೀರು ಬರ್ತಿದೆ.

ಅಲಮಟ್ಟಿಯಿಂದ ನದಿಗೆ 4.50 ಲಕ್ಷ ಕ್ಯೂಸೆಕ್​​ ನೀರನ್ನು ಹೊರ ಬಿಡಲಾಗ್ತಿದೆ. ಹೀಗಾಗಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಣೆಕಟ್ಟೆಯ ತಡೆಗೋಡೆ ದಾಟಿ ಗಾಡರ್ನ್​ಗೂ ಆಲಮಟ್ಟಿ ಡ್ಯಾಂ ನೀರು ಪ್ರವೇಶಿಸಿದೆ. ಶೇಕಡಾ 10ರಷ್ಟು ಗಾರ್ಡನ್ ಜಲಾವೃತವಾಗಿದ್ದು, ಸಂಗೀತಕಾರಂಜಿಯೂ ಮುಳುಗಿಹೋಗಿದೆ. ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ.

Comments are closed.