ರಾಷ್ಟ್ರೀಯ

ವಾರಣಾಸಿಯಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಸಲಿಂಗ ವಿವಾಹ: ಸೋದರ ಸಂಬಂಧಿ ಸಹೋದರಿಯರ ವಿವಾಹ

Pinterest LinkedIn Tumblr

ವಾರಣಾಸಿ: ಉತ್ತರ ಪ್ರದೇಶದ ಪ್ರಧಾನ ಮಂತ್ರಿ ವಾರಣಾಸಿ ಕ್ಷೇತ್ರದಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಘಟನೆ ನಡೆದಿದ್ದು ಇಬ್ಬರು ಸೋದರಸಂಬಂಧಿ ಸಹೋದರಿಯರು ತಮ್ಮ ಕುಟುಂಬದವರ ಆಶಯಕ್ಕೆ ವಿರುದ್ಧವಾಗಿ ವಿವಾಹವಾಗಿದ್ದಾರೆ.

ತಾವು ಮದುವೆಯಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಯುವತಿಯರ ಫೋಟೋಗಳು ವೈರಲ್ ಆಗಿವೆ.

ವಾರಣಾಸಿಯಲ್ಲಿ ಇದು ಬಹುಶಃ ಮೊದಲ ಸಲಿಂಗ ವಿವಾಹವಾಗಿರಬೇಕು. ವಾರಣಾಸಿಯ ರೊಹನಿಯಾ ನಿವಾಸಿಗಳಾಗಿರುವ ಯುವತಿಯರು ನಿನ್ನೆ ಶಿವ ದೇವಸ್ಥಾನಕ್ಕೆ ಹೋಗಿ ತಮ್ಮ ಮದುವೆ ನೆರವೇರಿಸಿಕೊಡುವಂತೆ ಅರ್ಚಕರಲ್ಲಿ ಕೇಳಿಕೊಂಡರು. ಆರಂಭದಲ್ಲಿ ಅರ್ಚಕ ಒಪ್ಪಲಿಲ್ಲ, ಆಗ ಯುವತಿಯರು ತಮ್ಮ ಮದುವೆಯಾಗದೆ ದೇವಸ್ಥಾನ ಬಿಟ್ಟು ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತರು.

ಜೀನ್ಸ್ ಮತ್ತು ಟಿ ಶರ್ಟ್ ಧರಿಸಿ ತಲೆಗೆ ಕೆಂಪು ಶಾಲು ಹೊದ್ದುಕೊಂಡು ಮದುವೆಯಾದರು. ಮದುವೆಯಾದ ಹೊತ್ತಿಗೆ ದೇವಸ್ಥಾನದಲ್ಲಿ ಬಹಳ ಜನ ಸೇರಿದ್ದರು. ಯಾವುದೇ ಅಹಿತಕರ ಘಟನೆ ನಡೆಯುವ ಮೊದಲು ಜೋಡಿ ದೇವಸ್ಥಾನದಿಂದ ಹೊರಬಂದರು.

ಮದುವೆ ಮಾಡಿಸಿದ್ದಕ್ಕೆ ಕೆಲವರು ಅರ್ಚಕರನ್ನು ಬೈದಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಚಕ, ಕಾನ್ಪುರದ ಯುವತಿ ಅಧ್ಯಯನ ಮಾಡಲೆಂದು ವಾರಣಾಸಿಗೆ ಬಂದು ತನ್ನ ಸೋದರ ಸಂಬಂಧಿ ಜೊತೆ ನೆಲೆಸಿದ್ದಳು ಎಂದರು.

Comments are closed.