
ನವದೆಹಲಿ(ಜೂನ್.01): ಪತಿಯೋರ್ವ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಸಾಯಿಸಿ, ತಾನು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಗುರುಗ್ರಾಮದಲ್ಲಿ ನಡೆದಿದೆ. ವೃತ್ತಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿರುವ ಈತ ನಿನ್ನೆ(ಭಾನುವಾರ) ರಾತ್ರಿ, ಇಡೀ ಕುಟುಂಬವನ್ನ ಕತ್ತು ಸೀಳಿ ಕೊಂದು ಹಾಕಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕಾಶ್ ಸಿಂಗ್ (55) ಎಂಬಾತ ತನ್ನ ಪತ್ನಿ, 22 ವರ್ಷದ ಪುತ್ರಿ ಹಾಗೂ 13 ವರ್ಷದ ಪುತ್ರ ಮಲಗಿದ್ದ ವೇಳೆ ಈ ಕೃತ್ಯ ಎಸಗಿದ್ದಾನೆ. ನಂತರ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡು ಪ್ರಾಣವನ್ನು ಕಳೆದುಕೊಂಡಿದ್ದಾನೆ. ಭಾನುವಾರ ರಾತ್ರಿಯಿಂದ ಸೋಮವಾರದ ಸಂಜೆಯವರೆಗೂ ಇಂಜಿನಿಯರ್ ಕುಟುಂಬದವರು ಮೆನಯಿಂದ ಹೊರಗೆ ಬಾರದ ಕಾರಣ, ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನೆರೆಹೊರೆಯವರು ನೀಡಿದ ಮಾಹಿತಿ ಆಧಾರದ ಮೇರೆಗೆ ಪೊಲೀಸರು ದಿಢೀರ್ ಮನೆಗೆ ಆಗಮಿಸಿದ್ದಾರೆ. ಮನೆಯ ಬಾಗಿಲೊಡೆದು ಒಳ ಪ್ರವೇಶಿಸಿದಾಗ ನಾಲ್ಕು ಮಂದಿಯೂ ನೆಲದ ಮೇಲೆ ಸತ್ತುಬಿದ್ದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಂಬಂಧ ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಲ್ಲದೇ ಮನೆ ಪರಿಶೀಲನೆ ವೇಳೆ ಒಂದು ಚೀಟಿ ಪತ್ತೆಯಾಗಿದ್ದು, ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಕುಟುಂಬದ ಹಿನ್ನೆಲೆ: ಪ್ರಕಾಶ್ ಸಿಂಗ್ ಹೈದರಾಬಾದ್ ಮೂಲದ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಗುರುಗ್ರಾಮದಲ್ಲಿ ಕಳೆದ ಎಂಟು ವರ್ಷಗಳಿಂದ ಆತನ ಕುಟುಂಬ ನೆಲೆಸಿತ್ತು. ಇದೇ ನಗರದಲ್ಲಿ ಪತ್ನಿ ಒಂದು ಸ್ವಂತ ಶಾಲೆ ಕೂಡ ನಡೆಸುತ್ತಿದ್ದರು.
Comments are closed.