
ಬರ್ಮಿಂಗ್ ಹ್ಯಾಮ್: ತಂಡವು ಗೆಲ್ಲುವ ಹಂತದಲ್ಲಿ ಇದ್ದಾಗ ಬಲವಾದ ಹೊಡೆತದ ಅವಶ್ಯಕತೆ ಇರುತ್ತೇ ಜೊತೆಗೆ ಎಕ್ಸ್–ಫ್ಯಾಕ್ಟರ್ನಲ್ಲಿ ಆಡಬೇಕಾಗಿತು. ನಮಗೆ ಬೇನ್ ಸ್ಟ್ರೋಕ್ ಆಟದ ರೀತಿಯಲ್ಲಿ ಆಡಬೇಕಾದ ಅಗತ್ಯವಿತ್ತು ಎಂದು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್, ಉಪನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಂಡದ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದರು. ರಿಷಬ್ ಪಂತ್, 338ರನ್ ಬೆನ್ನಟ್ಟುವ ಯೋಜನೆ ಜೊತೆಗೆ ಮಹೇಂದ್ರ ಸಿಂಗ್ ಧೋನಿ ಅವರ ನಿಧಾನಗತಿ ಬ್ಯಾಟಿಂಗ್ ಬಗ್ಗೆ ಮಾತನಾಡಿದರು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಸಮರ್ಥನೆ ಮಾಡಿಕೊಂಡಿದರ ಬಗ್ಗೆ ಕೇಳಿದ್ದಕ್ಕೆ ರೋಹಿತ್ ಶರ್ಮಾ ಮಾತನಾಡದೇ ಮೌನವಹಿಸಿದರು.
ತಂಡಕ್ಕೆ ಅಗತ್ಯವಿದ್ದಾಗ ಬೇನ್ ಸ್ಟ್ರೋಕ್ ರೀತಿ ಆಟ ಆಡುವುದು ಅವಶ್ಯಕತೆ ಇತ್ತು ಎಂದು ಹೇಳುವ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರ ಆಟದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ಅವರ ಮಾತಿನಲ್ಲಿ ಮೆಲ್ನೋಟಕ್ಕೆ ಹೇಳಬಹುದು.
ಅಲ್ಲದೇ ವಿರಾಟ್ ಕೊಹ್ಲಿ ಸಮರ್ಥನೆ ಬಗ್ಗೆ ಕೂಡ ಅವರು ಬಾಯಿ ತೆರೆಯದೇ ಇರುವುದು ಸಹ ಇದಕ್ಕೆ ಪುಷ್ಠಿಯನ್ನು ನೀಡುತ್ತದೆ.
ಇತ್ತೀಚಿನ ದಿನಗಳಲ್ಲಿ 300ರನ್ ಹೆಚ್ಚೇನು ಅಲ್ಲ ಒಳ್ಳೆಯ ಮೈದಾನ, ಬೌಂಡರಿಗಳ ಮೂಲಕ ಅದನ್ನು ಸುಲಭವಾಗಿ ಬೆನ್ನಟ್ಟಬಹುದು ಆದರೆ ಉತ್ತಮವಾದ ಆರಂಭ ಕೊಡಬೇಕಷ್ಟೇ ಎಂದು ಅವರು ತಿಳಿಸಿದರು.
ನಾವು ಈ ದಿನ ಅದನ್ನ ಮಾಡಿದ್ದೆವು, ಉತ್ತಮ ಜೊತೆಯಾಟ ನೀಡಿದ್ದೆವು ಆದರೆ 330-340ರನ್ ಬೆನ್ನಟ್ಟುವಾಗ ಎಕ್ಸ್ ಪ್ಯಾಕ್ಟರ್ ಇನ್ನಿಂಗ್ಸ್ ಆಡುವಾಗ 30-40 ಬಾಲ್ಗಳಲ್ಲಿ 70ರನ್ಗಳನ್ನು ಗಳಿಸುವ ಕಡೆ ಗಮನವಹಿಸಬೇಕು. ಇದನ್ನು ಹಾರ್ಧಿಕ್ ಪಾಂಡ್ಯ ಮಾಡಿದರು ಆದರೆ ಅದು ಮುಂದುವರೆಯಲಿಲ್ಲ ಅಷ್ಟೇ ಎಂದು ಅವರು ನುಡಿದರು.
ಅಲ್ಲದೆ ಎದುರಾಲಿ ತಂಡದ ಬ್ಯಾಟ್ಮನ್ ಆಲ್ ಲೌಂಡರ್ ಆಟಗಾರರ ಬೇನ್ ಸ್ಟ್ರೋಕ್ ಅವರು ತಂಡದ ಆಟದ ಗತಿಯನ್ನು ಬದಲಾಯಿಸಿತು. ಆಂಗ್ಲರು ಅವರನ್ನು ಬಹುಬೇಗನೇ ಬ್ಯಾಟಿಂಗ್ಗೆ ಕಳುಹಿಸಿ ಅವರಿಂದ ಭರ್ಜರಿ ಆಟದ ನಿರೀಕ್ಷೆಯನ್ನು ಅವರು ಹೊಂದಿದ್ದರು ಪರಿಣಾಮ ಬೃಹತ್ ಮೊತ್ತ ಸೇರಿತು ಎಂದು ಉಪನಾಯಕ ರೋಹಿತ್ ಶರ್ಮಾ ಅವರು ತಿಳಿಸಿದರು.
ರೋಹಿತ್ ಶರ್ಮಾ ಈ ಪಂದ್ಯದಲ್ಲಿ 102ರನ್ ಆಟ ಆಡುವುದರ ಮೂಲಕ ವಿಶ್ವಕಪ್ನಲ್ಲಿ ಮೂರನೇ ಭರ್ಜರಿ ಶತಕ ಸಿಡಿಸಿದರು. ಭಾರತ ಆಂಗ್ಲರ ವಿರುದ್ಧ 31ರನ್ಗಳ ಅಂತರದಿಂದ ಸೋಲು ಕಂಡಿತು.
Comments are closed.