ಕರ್ನಾಟಕ

ಪುತ್ರನ ಸೋಲಿನ ಕಾರಣಕ್ಕೆ ಕುಮಾರಸ್ವಾಮಿ ಮಂಡ್ಯವನ್ನು ಕಡೆಗಣಿಸುತ್ತಿದ್ದಾರೆ

Pinterest LinkedIn Tumblr


ಮಂಡ್ಯ : ಅಧಿಕಾರ ಶಾಶ್ವತವಲ್ಲ. ಯಾವುದೇ ದೃಷ್ಟಿಯಿಂದ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲ್ಲೂಕಿನ, ಬಿಂಡಿಗನವಿಲೆ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅಸಮಾಧಾನ ಹೊರಹಾಕಿದ ಚಲುವರಾಯಸ್ವಾಮಿ. ಮಗನ ಸೋಲಿನ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಚಲುವರಾಯಸ್ವಾಮಿ ಅನುಮಾನ ವ್ಯಕ್ತಪಡಿಸಿದರು. ವೈಯಕ್ತಿಕ ಕಾರಣ ಏನೇ ಇರಲಿ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಮನವಿ ಮಾಡಿದರು.

ವೈಯಕ್ತಿಕ ಕಾರಣ ಏನೇ ಇರಲಿ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ

ರೈತರ ಬೆಳೆ ರಕ್ಷಣೆಗೆ ನೀರು ಹರಿಸುವ ವಿಷ್ಯವಾಗಿ ಅಸಮಾಧಾನ ಹೊರಹಾಕುತ್ತ, ರೈತರಿಗೆ 10-15 ದಿನ ನೀರು ಬಿಡುವ ಅವಕಾಶ ಇತ್ತು, ಜಿಲ್ಲೆಯ ಒಬ್ಬ ಜನಪ್ರತಿನಿಧಿಯೂ ಕಾವೇರಿ ಸಭೆ ಕರೆಯಲಿಲ್ಲ, ಮುಖ್ಯಮಂತ್ರಿ ಬಳಿ ಜಿಲ್ಲೆಯ ಸಮಸ್ಯೆ ಬಗ್ಗೆ ಹೇಳಲಿಲ್ಲ.. ಅದಕ್ಕೆ ಕಾರಣ ಕಳೆದ ಚುನಾವಣೆಯಲ್ಲಿ ವ್ಯತ್ಯಾಸ ಮಾಡಿದರು ಅಂತಲೋ, ಸಿಟ್ಟು ಬಂದಿದೆಯೋ, ಜನಕ್ಕೆ ಸಹಾಯ ಮಾಡೋದು ಬೇಡ ಎಂಬ ಅಸಮಾಧಾನ ಆಗಿದೆಯೋ ಕಾರಣ ಗೊತ್ತಿಲ್ಲ ಎಂದರು.

ಮಂಡ್ಯ ಜಿಲ್ಲೆ ನಿಮಗೆ ಆಶಿರ್ವಾದ ಮಾಡಿದೆ

ಬೆಳೆಗೂ ನೀರು ಕೊಟ್ಟು ಕುಡಿಯುವುದಕ್ಕೂ ನೀರು ಉಳಿಸಿಕೊಳ್ಳಬಹುದಿತ್ತು. ಖಡಾಖಂಡಿತವಾಗಿ ನೀರು ಬಿಡೋದು ಬೇಡ ಎಂದು ತೀರ್ಮಾನಿಸಿದ್ದಾರೆ. ಮಂಡ್ಯ ಜಿಲ್ಲೆಯ ಜನ ತುಂಬಾ ಒಳ್ಳೆಯವರು. ಮೋಸ ಮಾಡಿದರೂ ಸಹಿಸಿಕೊಳ್ಳುತ್ತೀರ. ನೀವು ಎಂದಾದರೂ ಒಂದು ದಿನ ಇದನ್ನು ಅರ್ಥ ಮಾಡಿಕೊಳ್ಳುತ್ತೀರ. ಈ ಸರ್ಕಾರ, ಇವತ್ತಿನ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯನ್ನು ಕಡೆಗಣಿಸುವುದು ಸೂಕ್ತ ಅಲ್ಲ, ಅನೇಕ ಬಾರಿ ಮಂಡ್ಯ ಜಿಲ್ಲೆ ಪೂರ್ಣ ಪ್ರಮಾಣದ ಆಶಿರ್ವಾದವನ್ನು ನಿಮಗೆ ಮಾಡಿದೆ. ಹಾಗಾಗಿ ಜಿಲ್ಲೆ ಬಗ್ಗೆ ಈ ರೀತಿಯ ನಿರ್ಣಯ ತೆಗೆದುಕೊಳ್ಳುವುದು ಸೂಕ್ತ ಅಲ್ಲ, ವೈಯಕ್ತಿಯ ಕಾರಣ ಏನೇ ಇರಲಿ. ಅವಕಾಶ ಎಲ್ಲ ಸಮಯದಲ್ಲೂ ಬರಲ್ಲ. 120 ಜನ ಗೆದ್ದು ಮುಖ್ಯಮಂತ್ರಿ ಆದರೂ ಒಂದೇ. 30 ಜನ ಗೆದ್ದು ಮುಖ್ಯಮಂತ್ರಿ ಆದರೂ ಒಂದೇ. ನಿಮ್ಮ ಸಹಿ ಬದಲಾಗಲ್ಲ, ವೈಯಕ್ತಿಕ ಕಾರಣ ಏನೇ ಇರಲಿ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಮನವಿ ಮಾಡಿದರು.

Comments are closed.