ಕರ್ನಾಟಕ

ಕಿಮ್ಸ್‌ನಲ್ಲಿ ಸ್ಟಾಫ್‌ ನರ್ಸ್‌ಗೇ ಥಳಿಸಿ, ಬಟ್ಟೆ ಹರಿದ ಮಹಿಳೆಯರು

Pinterest LinkedIn Tumblr

ಹುಬ್ಬಳ್ಳಿ: ಪ್ರತಿ ಬಾರಿ ಒಂದಿಲ್ಲೊಂದು ಎಡವಟ್ಟುಗಳಿಂದ ಸುದ್ದಿಗೆ ಬರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಎಡವಟ್ಟಿಗೆ ಸುದ್ದಿಯಾಗಿದೆ. ಈ ಆಸ್ಪತ್ರೆಯ ವೀಡಿಯೋ ಒಂದು ವೈರಲ್ ಆಗಿದ್ದು, ಈ ವೀಡಿಯೋ ನೋಡಿದ್ರೆ, ಅಲ್ಲಿನ ಸಿಬ್ಬಂದಿಗಳಿಗೇ ಭದ್ರತೆ ಇಲ್ವಾ ಅನ್ನೋ ಪ್ರಶ್ನೆ ಮೂಡತ್ತೆ. ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಮೇಲೆ ಹಲ್ಲೆ ನಡೆಸಲಾಗಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ದಿನಾಂಕ 17ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ರೇವಣಸಿದ್ದಪ್ಪ ಎಂಬ ಸ್ಟಾಫ್ ನರ್ಸ್‌ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಮಹಿಳಾ ಸಂಘಟನೆಯ ಅಧ್ಯಕ್ಷೆ ಎಂದು ಹಲ್ಲೆ ಮಾಡಿದ್ದು, ರೇವಣಸಿದ್ದಪ್ಪಗೆ ಕಿಮ್ಸ್‌ನಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ.

 

ಡ್ಯೂಟಿ ಮೇಲೆ ಇರುವಾಗ ನರ್ಸ್‌ ಮೇಲೆ ಹಲ್ಲೆ ನಡೆಸಿದ್ದು, ಹೊರಗಡೆ ಎಳೆದುಕೊಂಡು ಹೋಗಿ ಮೈ ಮಲಿನ ಬಟ್ಟೆ ಹರಿದಿದ್ದಾರೆ. ಇನ್ನು ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಏನೇ ತಪ್ಪು ಮಾಡಿದ್ರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಈ ರೀತಿ ಹಲ್ಲೆ ಮಾಡಿರುವುದು ಎಷ್ಟು ಸರಿ..?ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

 

Comments are closed.