
ಇಂಗ್ಲೆಂಡ್, ಮ್ಯಾಂಚೆಸ್ಟರ್: ಟೀಂ ಇಂಡಿಯಾ ನಾಯಕ, ರನ್ ಮಿಷಿನ್, ವಿಶ್ವದ ನಂಬರ್ ಒನ್ ಬ್ಯಾಟ್ಸ್ಮೆನ್ ವಿರಾಟ್ ಕೊಹ್ಲಿ ಅವರು ತಮ್ಮ ಹೆಸರಿಗೆ ಮೊತ್ತೊಂದು ದಾಖಲೆಯನ್ನು ಬರೆದುಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.
ಹೌದು, ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್ 2019 ಇಂಗ್ಲೆಂಡ್ನಲ್ಲಿ ಆರಂಭವಾಗಿದ್ದು ಭಾನುವಾರ ನಡೆದ ಪಾಕಿಸ್ತಾನ ಭಾರತ ನಡುವಿನ ಪಂದ್ಯದಲ್ಲಿ ಅವರು ಆಕರ್ಷಕ ಅರ್ಧಶತಕ(77) ದಾಖಲಿಸಿದರು.
ಈ ಮಧ್ಯೆ ಅವರ ವೈಯಕ್ತಿಕ ದಾಖಲೆ ಕೂಡ ಮಾಡಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ 11 ಸಾವಿರ ರನ್ಗಳನ್ನು ಪೂರೈಸಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಬ್ರೇಕ್ ಮಾಡಿದಲ್ಲದೇ ಜಗತ್ತಿನ 9ನೇ ಆಟಗಾರ ಎಂಬ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಅಲ್ಲದೇ ಕೇವಲ 222 ಇನ್ನಿಂಗ್ 230 ಪಂದ್ಯಗಳನ್ನು ಆಡಿ ಅತೀ ವೇಗವಾಗಿ 11 ಸಾವಿರ ರನ್ ಪೂರೈಕೆ ಮಾಡಿದ ವಿಶ್ವದ ಮೊದಲ ಆಟಗಾರರ ಎಂಬ ಹೆಗ್ಗಳಿಕೆಗೂ ಕೂಡ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ವಿರಾಟ್ ಈ ಸಾಧನೆ ಮಾಡಲು 11 ವರ್ಷ ತೆಗೆದುಕೊಂಡರೇ, ಸಚಿನ್ ಅವರು ಈ ಸಾಧನೆ ಮಾಡಲು 276 ಇನ್ನಿಂಗ್ಸ್ 284 ಪಂದ್ಯಗಳನ್ನು ಆಡಿದ್ದರು. ಈ ಗುರಿ ಮಟ್ಟಲು ಸಚಿವ 11 ವರ್ಷ 41 ದಿನಗಳನ್ನು ತೆಗೆದುಕೊಂಡಿದ್ದರು.
ವಿರಾಟ್ ಕೊಹ್ಲಿ ಅತೀ ಹೆಚ್ಚು ಶತಕದಲ್ಲೂ ಸಹ ಸಚಿನ್ ತೆಂಡೂಲ್ಕರ್ ಅವರ ಸನಿಹದಲ್ಲಿ ಇದ್ದಾರೆ. ಸಚಿವ ಏಕದಿನ ಕ್ರಿಕೆಟ್ನಲ್ಲಿ 49 ಶತಕ ಸಿಡಿಸಿ ನಿವೃತ್ತಿ ಹೊಂದಿದ್ದಾರೆ. ವಿರಾಟ್ 41 ಶತಕ ಬಾರಿಸಿ ತಮ್ಮ ಆಟ ಮುಂದುವರೆಸಿದ್ದಾರೆ. ಕೊಹ್ಲಿಗೆ ಈ ದಾಖಲೆ ಬ್ರೇಕ್ ಮಾಡಲು ಕೇವಲ 9 ಶತಕ ಮಾತ್ರ ಬಾಕಿ ಇದೆ.
ಈಗಾಗಲೇ ವಿರಾಟ್ ಕೊಹ್ಲಿ ಐಸಿಸಿ ಕೊಡುವ ಮೂರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವರ್ಷದ ಏಕದಿನ ಕ್ರಿಕೆಟ್ ಆಟಗಾರರ ಪ್ರಶಸ್ತಿ, ವರ್ಷದ ಟೆಸ್ಟ್ ಕ್ರಿಕೆಟ್ ಆಟಗಾರ ಪ್ರಶಸ್ತಿ, ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದು 2015ರಿಂದ ಈಚೆಗೆ ಕೊಹ್ಲಿ ಅವರು ಅದ್ಬುತ ಆಟ ಪ್ರದರ್ಶನ ಮಾಡಿದ್ದಾರೆ.
ಸದ್ಯ 11 ಸಾವಿರ ರನ್ ಪೂರೈಕೆ ಮಾಡಿದ ಮೊದಲ ಮತ್ತು ಎರಡನೇ ಸ್ಥಾನವನ್ನು ಭಾರತೀಯರೇ ಮಾಡಿದ್ದಾರೆ.
ರಿಕಿ ಪಾಂಟಿಂಗ್ ಮೂನೇ ಸ್ಥಾನದಲ್ಲಿದ್ದಾರೆ. ಅವರು ಈ ಸಾಧನೆ ಮಾಡಲು 286 ಇನ್ನಿಂಗ್ಸ್ ಆಡಿದ್ದಾರೆ. ನಂತರ ಸೌರವ್ ಗಂಗೂಲಿ 288 ಇನ್ನಿಂಗ್ ತೆಗೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಆಟಗಾರ ಜಾಕ್ ಕಾಲಿಸ್ 293 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.
Comments are closed.