
ಕಲಬುರಗಿ: ಪ್ರಸ್ತುತ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರೇ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಅವರಿಗೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಚಿಂಚೋಳಿ ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಸುಭಾಷ ರಾಠೊಡ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟ ಹಾಗೂ ರಾಜಕೀಯ ಅನುಭವ ಆಧರಿಸಿ ಎಂದೋ ಸಿಎಂ ಆಗಬೇಕಿತ್ತು. ಅವರ ಪರಿಶ್ರಮಕ್ಕೆ ಸ್ಥಾನ ನೀಡುವಲ್ಲಿ ಲೋಪವಾಗಿದೆ. ಖರ್ಗೆ ಈ ಭಾಗದ ಮಹಾನ್ ನಾಯಕ. ಅವರಿಗೆ ನೋವು ಕೊಡಬೇಡಿ’ ಎಂದರು.
“ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ನಾನು ಸಿಎಂ ಆಗಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು. ಒಂದು ವೇಳೆ, ಮೊದಲೇ ಈ ವಿಷಯ ಗೊತ್ತಿದ್ದರೆ, ನಾನೇ ಕಾಂಗ್ರೆಸ್ನ ಹೈಕಮಾಂಡ್ ಜೊತೆ ಕುಳಿತುಕೊಂಡು, ಖರ್ಗೆಯವರು ಐವತ್ತು ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಅವರನ್ನು ಸಿಎಂ ಮಾಡಿ ಎನ್ನುತ್ತಿದ್ದೆ’ ಎಂದರು.
Comments are closed.