ರಾಷ್ಟ್ರೀಯ

ತಾಯಿಯ ಆಶೀರ್ವಾದ ಪಡೆದ ಬಳಿಕ ಮತದಾನ ಮಾಡಿದ ಪ್ರಧಾನಿ ಮೋದಿ ಹೇಳಿದ್ದೇನು…?

Pinterest LinkedIn Tumblr

ಅಹ್ಮದಾಬಾದ್ : ಗುಜರಾತ್ ರಾಜ್ಯದ ಅಹ್ಮದಾಬಾದ್ ಜಿಲ್ಲೆಯ ರಾನಿಪ್ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮತದಾನ ಮಾಡಿದರು.

ಗಾಂಧಿನಗರದ ನಿವಾಸದಲ್ಲಿರುವ ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ರಾನಿಪ್ ಗೆ ಆಗಮಿಸಿದ ಪ್ರಧಾನಿ ಮೋದಿ ನಿಶಾನ್ ಪ್ರೌಢಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಉಗ್ರರ ಅಸ್ತ್ರ ಐಇಡಿ, ಮೋಟರ್ ಐಡಿ ಪ್ರಜಾಪ್ರಜಾಪ್ರಭುತ್ವದ ಶಸ್ತ್ರವಾಗಿದೆ. ಐಇಡಿಯಿಂದ ಮತದಾನದ ಗುರುತಿನ ಚೀಟಿ ಪ್ರಬಲವಾದದ್ದು, ಆದ್ದರಿಂದ ವೋಟರ್ ಐಡಿಯ ಪ್ರಬಲತೆ ಬಗ್ಗೆ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.

ನನ್ನ ತವರು ರಾಜ್ಯದಲ್ಲಿ ನನಗೂ ಮತದಾನ ಮಾಡುವ ಸೌಭಾಗ್ಯ ದೊರಕಿದೆ. ಮತದಾನ ಪ್ರಜಾಪ್ರಭುತ್ವದ ಪಾಲುದಾರರನಾಗಿದ್ದೇನೆ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹ, ಹೊಸ ಆಶಯದೊಂದಿಗೆ ಮತದಾನ ಮಾಡಿ ಎಂದು ಜನತೆಗೆ ಮೋದಿ ಕರೆ ನೀಡಿದರು.

Comments are closed.