ಕ್ರೀಡೆ

2019ರ ಕ್ರಿಕೆಟ್ ವಿಶ್ವಕಪ್; ಭಾರತ ತಂಡ ಪ್ರಕಟ, ಆಟಗಾರರ ಪಟ್ಟಿ ಇಲ್ಲಿದೆ…..

Pinterest LinkedIn Tumblr

ಮುಂಬಯಿ: ಮುಂಬರುವ 2019 ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡವನ್ನು ಸೋಮವಾರ ಘೋಷಿಸಲಾಗಿದ್ದು, ಕನ್ನಡಿಗ ಕೆ.ಎಲ್.ರಾಹುಲ್ ಪ್ರಮುಖವಾದ 4ನೇ ಸ್ಥಾನದಲ್ಲಿ ಆಡಲು ಆಯ್ಕೆಯಾಗಿದ್ದಾರೆ.

ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಸಿಸಿಐ ಆಯ್ಕೆ ಸಮಿತಿಯು ಟೀಮ್ ಇಂಡಿಯಾವನ್ನು ಘೋಷಿಸಿದ್ದು, ಕ್ರಿಕೆಟ್ ಮಹಾ ಯುದ್ಧದಲ್ಲಿ ಭಾರತಕ್ಕೆ ಮತ್ತೆ ಕಪ್ ಒದಗಿಸಿಕೊಡುವ ಕ್ರಿಕೆಟ್ ಪಡೆಯನ್ನು ಆಯ್ಕೆ ಮಾಡಲಾಗಿದೆ.

ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರಿದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರು ವಿಕೆಟ್ ಕೀಪರ್ ಆಗಿ ಮುಂದುವರಿದಿದ್ದು, ಎರಡನೇ ವಿಕೆಟ್ ಕೀಪರ್ ಆಗಿ ಕರ್ನಾಟಕದ ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದಾರೆ. ನಂ.4ನೇ ಸ್ಥಾನದಲ್ಲಿ ವಿಜಯ್ ಶಂಕರ್ ಆಡಲಿದ್ದಾರೆ.

ಟೀಂ ಇಂಡಿಯಾ ತಂಡ
ವಿರಾಟ್ ಕೊಹ್ಲಿ(ನಾಯಕ)
ರೋಹಿತ್ ಶರ್ಮಾ(ಉಪನಾಯಕ)
ಶಿಖರ್ ಧವನ್
ಕೆಎಲ್ ರಾಹುಲ್
ವಿಜಯ್ ಶಂಕರ್
ಕೇದಾರ್ ಜಾದವ್
ದಿನೇಶ್ ಕಾರ್ತಿಕ್
ಎಂಎಸ್ ಧೋನಿ
ಕುಲದೀಪ್ ಯಾದವ್
ಭುವನೇಶ್ವರ್ ಕುಮಾರ್
ಯಜುವೇಂದ್ರ ಚಹಾಲ್
ಜಸ್ ಪ್ರೀತ್ ಬುಮ್ರಾ
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ
ಮೊಹಮ್ಮದ್ ಶಮಿ

Comments are closed.