ಕರ್ನಾಟಕ

ಮುಂಬೈಗೆ ಅತೃಪ್ತ ಕಾಂಗ್ರೆಸ್ ನ ಶಾಸಕರನ್ನ ಕರೆತರಲು 40 ಜನರ ಪೊಲೀಸ್ ತಂಡ

Pinterest LinkedIn Tumblr


ಬೆಂಗಳೂರು: ಕಳೆದೊಂದು ತಿಂಗಳಿನಿಂದ ನಾಪತ್ತೆಯಾಗಿರುವ ಕಾಂಗ್ರೆಸ್ ನ ನಾಲ್ಕು ಅತೃಪ್ತ ಶಾಸಕರನ್ನ ಹುಡುಕಲು ರಾಜ್ಯದ 40 ಜನರ ಪೊಲೀಸ್ ತಂಡ ಮುಂಬೈಗೆ ತೆರಳಿದೆ.

ನಮ್ಮ ಕ್ಷೇತ್ರದ ಶಾಸಕರು ಕಾಣೆಯಾಗಿದ್ದು ಹುಡುಕಿಕೊಡಿ ಎಂದು ಆಯಾ ಶಾಸಕರ ಕ್ಷೇತ್ರದ ಜನರು ಸ್ಪೀಕರ್ ಗೆ ಪತ್ರ ಬರೆದಿದ್ದರು. ಜನರ ಮನವಿ ಮೇರೆಗೆ ಶಾಸಕರು ಏಲ್ಲಿದ್ದಾರೆ ಎನ್ನುವುದನ್ನು ಹುಡುಕಿ ಅವರನ್ನ ಕರೆತನ್ನಿ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗೋಕಾಕ್ ಶಾಸಕ ಮತ್ತು ಟೀಮ್ ಅನ್ನು ಹುಡುಕಲು ರಾಜ್ಯ ಗೃಹ ಇಲಾಖೆ, 40 ಜನರ ಪೊಲೀಸ್ ತಂಡವನ್ನು ಮುಂಬೈಗೆ ರವಾನಿಸಿದೆ.

ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ನಾಲ್ವರು ಶಾಸಕರು ಯಾರ ಸಂಪರ್ಕಕ್ಕೂ ಸಿಗದೇ ಮುಂಬೈನ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

ಗೋಕಾಕ್ ಶಾಸಕ [ಮಾಧ್ಯಮದಿಂದ ಬ್ಯಾನ್ ಆಗಿದ್ದಾರೆ], ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಚಿಂಚೋಳ್ಳಿ ಶಾಸಕ ಡಾ. ಉಮೇಶ್ ಜಾಧವ್ ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ.

Comments are closed.