ಕರಾವಳಿ

ನಾಳೆ ಮಂಗಳೂರಿನಲ್ಲಿ ಎರಡನೇ ವರ್ಷದ ಹೊನಲು ಬೆಳಕಿನ ರಾಮ-ಲಕ್ಷಣ ಜೋಡುಕರೆ ಕಂಬಳ

Pinterest LinkedIn Tumblr

ಮಂಗಳೂರು, ಜನವರಿ,12 : ಮಂಗಳೂರಿನಲ್ಲಿ ನಡೆಯುವ ಏಕೈಕ ರಾಮ-ಲಕ್ಷಣ ಜೋಡುಕರೆ ಕಂಬಳ ಇದೇ ನಾಳೆ ಜನವರಿ 13ರಂದು ನಡೆಯಲಿದೆ. ಬಿಜೆಪಿ ಮುಖಂಡ ಹಾಗೂ ತಲಪಾಡಿ ದೊಡ್ಡಮನೆಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಾರಥ್ಯದಲ್ಲಿ ಎರಡನೇ ಬಾರಿ ಈ ಕಂಬಳವನ್ನು ಆಯೋಜಿಸಲಾಗಿದೆ.

ನಗರದ ಬಂಗ್ರಕೂಳೂರು ಗೋಲ್ಡ್‌ಫಿಂಚ್ ಸಿಟಿ ಮೈದಾನಲ್ಲಿ ನಡೆಯಲಿರುವ ಹೊನಲು ಬೆಳಕಿನ ಜೋಡು ಕೆರೆ ಕಂಬಳದ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದು, ರಾಮ -ಲಕ್ಷ್ಮಣ ಜೋಡುಕರೆ ಕಂಬಳ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ. ಪ್ರಕಾಶ್‌ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ಜ. 13ರಂದು ಬೆಳಗ್ಗೆ 9.30ರಿಂದ ನಡೆಯಲಿದೆ.

ಕಂಕನಾಡಿ ಗರೋಡಿ ಅಧ್ಯಕ್ಷ ಕೆ. ಚಿತ್ತರಂಜನ್‌ ಉದ್ಘಾಟಿಸಲಿದ್ದು, ಮೇಯರ್‌ ಭಾಸ್ಕರ್‌ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6ಕ್ಕೆ ಸಭಾಕಾರ್ಯಕ್ರಮ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಚಿವರಾದ ಡಿ.ವಿ. ಸದಾನಂದ ಗೌಡ, ಯು.ಟಿ. ಖಾದರ್‌, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್‌ ಕುಮಾರ್‌ , ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಜ. 14ರಂದು ಬೆಳಗ್ಗೆ 8ಕ್ಕೆ ಬಹುಮಾನ ವಿತರಣೆ ನಡೆಯಲಿದ್ದು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಂಬಳದಲ್ಲಿ ಸುಮಾರು 100 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾಹಿತಿ ನೀಡಿದ್ದಾರೆ.

ಮಂಗಳೂರು ನಗರ ಆಸುಪಾಸಿನಲ್ಲಿ ನಡೆಯುತ್ತಿರುವ ಏಕೈಕ ಕಂಬಳ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.

ಗೋಲ್ಡ್‌ಫಿಂಚ್ ಸಿಟಿ ಮೈದಾನಲ್ಲಿ ಕಂಬಳ ಕರೆ ಸಿದ್ಧಪಡಿಸಲಾಗಿದ್ದು, ಈಗಾಗಲೇ ಕರೆಗೆ ನೀರು ಹರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇತ್ತೀಚಿಗೆ ಹೊಟೇಲ್ ಗೋಲ್ಡ್‌ಫಿಂಚ್‌ನ ವ್ಯವಸ್ಥಾಪರಾದ ಬಾಲಕೃಷ್ಣ ಶೆಟ್ಟಿಯವರು ಕೆರೆಗೆ ಹಾಲೆರೆವುವ ಮೂಲಕ ಕಂಬಳ ಮಹೂರ್ಥ ನೆರೆವೇರಿಸಿದ್ದರು. ಬಳಿಕ ಒಂದು ಜೋಡಿ ಕೋಣಗಳನ್ನು ಪ್ರಯೋಗಿಕವಾಗಿ ಕೆರೆಯಲ್ಲಿ ಓಡಿಸುವ ಮೂಲಕ ಪರೀಕ್ಷೆ ನಡೆಸಲಾಗಿತ್ತು.

ಕಂಬಳದ ರೂವಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಂಬಳ ಗೌರವ ಸಲಹೆಗಾರ ಪ್ರಸಾದ್‌ ಕುಮಾರ್‌ ಶೆಟ್ಟಿ, ಕಾರ್ಯಾಧ್ಯಕ್ಷ ನಿತಿನ್‌ ಶೆಟ್ಟಿ ಅಗರಿ, ಪ್ರ. ಕಾರ್ಯದರ್ಶಿ ಉಳ್ಳಾಲ ನಂದನ್‌ ಮಲ್ಯ, ಪ್ರೀತಂ, ಸುಜಿತ್‌ ಪ್ರತಾಪ್‌, ಮುಖ್ಯ ಸಂಘಟಕ ಸಚಿನ್‌ ಶೆಟ್ಟಿ ಸಾಂತ್ಯಗುತ್ತು, ಉಪಾಧ್ಯಕ್ಷ ಜೋಯ್ಲಸ್‌ ಡಿ”ಸೋಜಾ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

ಚಿನ್ನದ ಬಹುಮಾನ :

ಕನೆ ಹಲಗೆ ವಿಭಾಗದಲ್ಲಿ ಪ್ರಥಮ 2 ಪವನು, ದ್ವಿತೀಯ 1 ಪವನು, ಹಗ್ಗ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ 2 ಪವನು,
ದ್ವಿತೀಯ 1ಪವನು, ಅಡ್ಡಹಲಗೆ, ಹಗ್ಗ, ನೇಗಿಲು, ಕಿರಿಯ ವಿಭಾಗದಲ್ಲಿ ಪ್ರಥಮ 1ಪವನು, ದ್ವಿತೀಯ ಅರ್ಧ ಪವನು ಚಿನ್ನ ಬಹುಮಾನ ನೀಡಲಾಗುತ್ತದೆ. ನಿಖರ ಫ‌ಲಿತಾಂಶಕ್ಕಾಗಿ ಲೇಸರ್‌ ಬೀಂ ನೆಟ್‌ವರ್ಕ್‌ ಸಿಸ್ಟಂ, ವೀಡಿಯೋ ದಾಖಲೀಕಣ ನಡೆಯಲಿದೆ.

Comments are closed.