
ಮಂಗಳೂರು, ಜನವರಿ.11 : ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ನಾಪತ್ತೆಯಾಗಿರುವ ತ್ರಿಭುಜ ಬೋಟ್ ನಲ್ಲಿರುವ 8 ಮಂದಿ ಸುರಕ್ಷಿತವಾಗಿ ಹಿಂತಿರುಗುವಂತೆ ವಿಶ್ವ ಹಿಂದು ಪರಿಷತ್ – ಬಜರಂಗದಳ ಮಂಗಳೂರು ಜಿಲ್ಲಾ ವತಿಯಿಂದ ನಾಳೆ ಮಂಗಳೂರಿನಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.
ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆಮೀನುಗಾರಿಕೆಗೆ ಹೊರಟಿದ್ದ ಚಂದ್ರಶೇಖರ್ಕೋಟ್ಯಾನ್ ಮಾಲೀಕತ್ವದ ಸುವರ್ಣ ತ್ರಿಭುಜಬೋಟ್ ನಾಪತ್ತೆಯಾಗಿ 27 ದಿನ ಕಳೆದಿದ್ದು,ಕರಾವಳಿ ರಕ್ಷಣಾ ಪಡೆ ಶೋಧ ಕಾರ್ಯತೀವ್ರಗೊಳಿಸಿದೆ. ಆದರೂ ಯಾವುದೇ ಸುಳಿವುಪತ್ತೆಯಾಗಿಲ್ಲ.
ಡಿ.13ರಂದು ರಾತ್ರಿ 11 ಗಂಟೆಸುಮಾರಿಗೆ ಮಲ್ಪೆ ಬಂದರಿನಿಂದ ದಾಮೋದರ,ಲಕ್ಷ್ಮಣ, ಸತೀಶ, ರವಿ, ಹರೀಶ, ರಮೇಶ,ಜೋಗಯ್ಯ ಎಂಬುವರು ಮೀನುಗಾರಿಕೆಗೆತೆರಳಿದ್ದರು. ಡಿ.15ರ ಮಧ್ಯರಾತ್ರಿವರೆಗೂಮೀನುಗಾರರ ಸಂಪರ್ಕದಲ್ಲಿದ್ದ ಬೋಟ್‌ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. 8 ಮೀನುಗಾರರ ಫೋನ್‌ಗಳು ಸ್ವಿಚ್ ಆಫ್ ಆಗಿದ್ದು, ಏನಾಗಿರಬಹುದು ಎನ್ನುವ ಸುಳಿವು ಕೂಡ ಸಿಕ್ಕಿಲ್ಲ,
ನಾಪತ್ತೆಯಾಗಿರುವ ಬೋಟ್ ನಲ್ಲಿರುವ 8 ಜನ ಸುರಕ್ಷಿತವಾಗಿ ಹಿಂತಿರುಗುವಂತೆ ವಿಶ್ವ ಹಿಂದುಪರಿಷತ್ – ಬಜರಂಗದಳ ಮಂಗಳೂರು ಜಿಲ್ಲಾವತಿಯಿಂದ ನಾಳೆ 12-01-2019 ಶನಿವಾರ ಬೆಳ್ಳಿಗ್ಗೆ 10:30 ಮಂಗಳೂರಿನ ಬಜಿಲಕೇರಿ ಕಾರಣಿಕ ಹನುಮಂತ ದೇವಸ್ಥಾನದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.
ನಾಪತ್ತೆಯಾಗಿರುವ 8 ಜನ ಶೀಘ್ರವಾಗಿ ಹಿಂತಿರುಗಲು ಮುಖ್ಯಪ್ರಾಣ ದೇವರ ಬಳಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಮಂಗಳೂರುಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ತಿಳಿಸಿದ್ದಾರೆ.
Comments are closed.