ಕರಾವಳಿ

ಕೋಟ: ಎಂಟು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕ ಅಪಘಾತದಲ್ಲಿ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಇದೇ ಡಿ.30 ರಂದು ಹಸೆಮಣೆ ಏರಬೇಕಿದ್ದ ತರುಣ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ಕೋಟೇಶ್ವರ ದೊಡ್ಡೋಣಿ ರಸ್ತೆಯ ಪೇಟೆಮನೆ ನಿವಾಸಿ ವರುಣ (30) ಮೃತಪಟ್ಟ ದುರ್ದೈವಿ.

ಮೂಲತಃ ಕೋಟೇಶ್ವರದವರಾದ ವರುಣ್ ಸದ್ಯ ಅಜ್ಜನ ಮನೆಯಾದ ತೆಕ್ಕಟ್ಟೆ ಹೆಬ್ಬಾರಬೆಟ್ಟುವಿನಲ್ಲಿದ್ದು ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ ಇವರು ಮದುವೆ ನಿಮಿತ್ತ ಕಳೆದ ನಾಲ್ಕೈದು ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಮದುವೆ ಕೆಲಸ, ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ವರುಣ್ ಶನಿವಾರ ಸಾಲಿಗ್ರಾಮ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುವ ಸಂದರ್ಭ ಈ ದುರ್ಘಟನೆ ನಡೆದಿದೆ. ತನ್ನ ಬೈಕಿನಲ್ಲಿ ಸಾಲಿಗ್ರಾಮ ಕಡೆಗೆ ಹೋಗುತ್ತಿರುವಾಗ ಚಿತ್ರಪಾಡಿ ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನ ಬಳಿ ಲಾರಿಯ ಚಾಲಕ ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದು ವರುಣ್ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಮುಂದೆ ಸಾಗುತ್ತಿದ್ದ ರೋಡ್ ರೋಲರಿಗೆ ಬೈಕ್ ತಾಗಿ ವರುಣ್ ರಸ್ತೆಗೆ ಬಿದ್ದಿದ್ದು ಅವರ ಮೇಲೆ ಲಾರಿ ಹತ್ತಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸರಳ ಸ್ವಭಾವದ ವರುಣ್ ಸಾವಿನಿಂದ ಕುಟುಂಬದ ರೋಧನ ಮುಗಿಲುಮುಟ್ಟಿತ್ತು.

ಕೋಟ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.