ಕರ್ನಾಟಕ

ಬೆಂಗಳೂರಿನಲ್ಲಿ ಸಾಕು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಾಜಿ ಪೊಲೀಸ್ ಅಧಿಕಾರಿ

Pinterest LinkedIn Tumblr

ಬೆಂಗಳೂರು: ತನ್ನ ಸಾಕು ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು 17 ವರ್ಷದ ಬಾಲಕಿ ದೂರು ದಾಖಲಿಸಿದ್ದಾಳೆ.

ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಪಿಎಸ್ ಐ ಆನಂದ್ ಕುಮಾರ್ (63) ವಿರುದ್ಧ ದೂರು ದಾಖಲಾಗಿದೆ. ಬಾಲಕಿ ಸದ್ಯ ಎನ್ ಜಿ ಓ ಆಶ್ರಯದಲ್ಲಿದ್ದಾಳೆ.

ಕೆಲ ವರ್ಷಗಳ ಹಿಂದೆ ಆನಂದ್ ಕುಮಾರ್ ಬಾಲಕಿಯನ್ನು ದತ್ತು ತೆಗೆದುಕೊಂಡಿದ್ದರು, ಸದ್ಯ ಆನಂದ್ ಕುಮಾರ್ ಖಾಸಗಿ ಗೋಲ್ಡ್ ಲೋನ್ ಫೈನಾನ್ಸ್ ಕಂಪನಿ ಒಂದರಲ್ಲಿ ಕಾನೂನು ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದಾರೆ, ನೆಲಮಂಗಲದ ವೇವರ್ಸ್ ಕಾಲೊನಿಯಲ್ಲಿ ಆತ ಕುಟುಂಬಸ್ಥರ ಜೊತೆ ವಾಸವಿದ್ದಾನೆ.

ಆರೋಗ್ಯ ಸಮಸ್ಯೆಯಿಂದಾಗಿ ಆನಂದ್ ಕುಮಾರ್ ಮಗಳು ಸಾವನ್ನಪ್ಪಿದ್ದಳು, ಹೀಗಾಗಿ ಆನಂದ್ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದ, ಆಕೆಗೆ 13 ವರ್ಷ ತುಂಬಿದ ನಂತರ ಆಕೆಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ, ಈ ವಿಷಯವನ್ನು ಯಾರಿಗಾದರೂ ಹೇಳಿದರೇ, ಮನೆಯಿಂದ ಹೊರ ಹಾಕುವುದಾಗಿ ಹೇಳಿ ತನ್ನ ದುರ್ವರ್ತನೆಯನ್ನು ಮುಂದುವರಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆತನೆ ಕಿರುಕುಳ ತಾಳಲಾರದೇ ಆಕೆ ಮನೆಯಿಂದ ಓಡಿಹೋಗಿ ಬಸ್ ಸ್ಟಾಂಡ್ ನಲ್ಲಿ ಮಲಗುತ್ತಿದ್ದಳು, ಆಕೆಯ ಪರಿಸ್ಥಿತಿ ಬಗ್ಗೆ ತಿಳಿದ ಸ್ಥಳೀಯರು ಆಕೆಯನ್ನು ಎನ್ ಜಿ ವಶಕ್ಕೆ ನೀಡಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಆಕೆಗೆ ಕೌನ್ಸೆಲಿಂಗ್ ನಡೆಸಲಾಯಿತು, ಡಿಸೆಂಬರ್ 18 ರಂದು ಆಕೆ ತನ್ನ ಸಾಕುತಂದೆ ನೀಡಿದ ಕಿರುಕುಳ ಬಗ್ಗೆ ವಿವರಿಸಿದ್ದಾಳೆ. ಆಕೆಯನ್ನು ನೆಲಮಂಗಲಕ್ಕೆ ಕರೆ ತಂದ ಎನ್ ಜಿ ಓ ಅಧಿಕಾರಿಗಳು ನೆಲಮಂಗಲ ಠಾಣೆಯಲ್ಲಿ ಆನಂದ್ ಕುಮಾರ್ ವಿರುದ್ದ ಆಕೆಯಿಂದ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ವಿಚಾರಣೆ ವೇಳೆ ತಾನು ಬಾಲಕಿಯ ಜೊತೆ ಕೆಟ್ಟದ್ದಾಗಿ ವರ್ತಿಸಿ ಆಕೆಗೆ ಕಿರುಕುಳ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Comments are closed.