ರಾಷ್ಟ್ರೀಯ

ಬಂಗಾಳಕೊಲ್ಲಿಯಲ್ಲಿ ‘ಗಜ’ ಚಂಡಮಾರುತ: ಹವಾಮಾನ ಇಲಾಖೆ ಮುನ್ಸೂಚನೆ

Pinterest LinkedIn Tumblr


ದೆಹಲಿ: ಮುಂದಿನ 24 ಗಂಟೆಗಳಲ್ಲಿ ಬಂಗಾಳಕೊಲ್ಲಿಯಲ್ಲಿ ‘ಗಜ’ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಈ ಚಂಡ ಮಾರುತ ತೀವ್ರಗೊಳ್ಳುತ್ತಿದ್ದು, ಉತ್ತರ ತಮಿಳುನಾಡು, ಪುದುಚೆರಿ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶಳಲ್ಲಿ ಭಾರಿ ಮಳೆಯಾಗಹುದು ಎಂದು ಮುನ್ನೆೆಚ್ಚರಿಕೆ ನೀಡಲಾಗಿದೆ. ತಮಿಳುನಾಡಿನ ಕಾರೈಕಲ್ ಮತ್ತು ಕಡ್ಲೂರು ನಡುವೆ ನವಂಬರ್ 14ರಂದು ಸಂಜೆ ಭಾರಿ ಮಳೆ ಸುರಿಯುವ ಸಾಧ್ಯತೆಗಳಿವೆ. ಅಂದು ಈ ಭಾಗಗಳಲ್ಲಿ ಗಾಳಿ ಗಂಟೆಗೆ ನೂರು ಕಿ.ಮೀ ವೇಗದಲ್ಲಿ ಸಾಗಲಿದೆ.

ಮುಂದಿನ 36 ಗಂಟೆಗಳಲ್ಲಿ ಗಜ ಚಂಡಮಾರುತವು ಪಶ್ಚಿಮ ಮತ್ತು ವಾಯುವ್ಯ ಭಾಗಗಳಲ್ಲಿ ಸಂಚರಿಸಿ ನಂತರ ಪಶ್ಚಿಮ-ನೈಋತ್ಯ ದಿಕ್ಕಿನತ್ತ ಚಲಿಸಿ ಉತ್ತರ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿ ಭಾಗಕ್ಕೆೆ ಅಪ್ಪಳಿಸಲಿದೆ ಎಂದು ಹವಾಮಾನ ತಿಳಿಸಿದೆ. ತಮಿಳುನಾಡಿನ ಉತ್ತರ ಕರಾವಳಿ ಮತ್ತು ದಕ್ಷಿಣದ ಆಂಧ್ರ ಕರಾವಳಿ ಭಾಗಗಳಲ್ಲಿ ನವಂಬರ್ 14ರಂದು ಸಂಜೆ ಭಾರಿ ಮಳೆಯಗುವ ಸಾಧ್ಯತೆಗಳಿವೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಸಮುದ್ರದಿಂದ ನ.12ರ ವೇಳೆಗೆ ಹಿಂತಿರುಗುವಂತೆ ಮೀನುಗಾರರಿಗೂ ಸೂಚನೆ ನೀಡಲಾಗಿದೆ. ನ.14ರ ನಂತರ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 11ರಂದು ತಿತ್ಲಿಿ ಚಮಡಮಾರುತ ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆೆ ಅಪ್ಪಳಿಸಿ, 70 ಜನರ ಸಾವಿಗೆ ಕಾರಣವಾಗಿತ್ತು. ಪ್ರತಿ ಗಂಟೆಗೆ 175 ಕಿ.ಮೀ ವೇಗದಲ್ಲಿ ಸಾಗಿದ್ದರಿಂದ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿದ್ದವು. ತೆಂಗು ಸೇರಿದಂತೆ ಅಪಾರ ಪ್ರಮಾಣದ ತೋಟದ ಬೆಳೆಗಳು ನಾಶವಾಗಿದ್ದವು.

Comments are closed.