
ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಸಾಕಷ್ಟು ಬಾರಿ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗುತ್ತದೆ. ರಾತ್ರೋರಾತ್ರಿ ನಿಮ್ಮ ಖಾತೆಯಲ್ಲಿರುವ ಕೆಲವು ಪೋಸ್ಟ್ಗಳು ಮಾಯಾವಾಗುವುದು ಹೇಗೆ ಎಂದು ನಿಮಗೆ ಗೊತ್ತಿರುವುದಿಲ್ಲ. ಇದಕ್ಕೆ ಇಲ್ಲಿದೆ ಉತ್ತರ. ಖುದ್ದು ಫೇಸ್ಬುಕ್ನ ಆಡಳಿತ ವರ್ಗವೇ 1.4 ಕೋಟಿ ಫೋಸ್ಟ್ಗಳನ್ನು ಡಿಲೀಟ್ ಮಾಡಿದೆ. ಹೌದು ಈಗ ಯಾರ‍್ಯಾರ ಖಾತೆಯಿಂದ ಯಾವ ಪೋಸ್ಟ್ಗಳು ಮಾಯವಾಗಿವೆ ಎಂದು ಒಮ್ಮೆ ನೋಡಿಕೊಳ್ಳಿ.
ಫೇಸ್ಬುಕ್ ಬಹಳ ಸಮಯದಿಂದ ಹಿಂಸಾತ್ಮಕ ಹಾಗೂ ಹಾನಿಕಾರ ಪೋಸ್ಟ್ಗಳನ್ನು ಡಿಲೀಟ್ ಮಾಡಲು ಟೊಂಕಕಟ್ಟಿ ನಿಂತಿದೆ. ಈಗಲೂ ಸಹ ಇಂತಹದ್ದೇ ಹಾನಿಕಾರಕ ಹಾಗೂ ಹಿಂಸಾತ್ಮಕವಾಗಿರುವ 1.4 ಕೋಟಿ ಪೋಸ್ಟ್ಗಳನ್ನು ತೆಗೆದು ಹಾಕಿದೆ. ಈ ವರ್ಷದ ಸೆಪ್ಟೆಂಬರ್ವರೆಗೆ ಪೋಸ್ಟ್ ಮಾಡಲಾಗಿರುವ ಹಾನಿಕಾರಕ ವಿಷಯಗಳನ್ನೆಲ್ಲ ಡಿಲೀಟ್ ಮಾಡಲಾಗಿದೆ.
ಇದೇ ವರ್ಷ ಏಪ್ರಿಲ್ನಿಂದ ಜೂನ್ ತಿಂಗಳಿನಲ್ಲೂ ಇಂತಹ ವಿಷಯಗಳ ಕುರಿತಾದ 90.4 ಲಕ್ಷ ಪೋಸ್ಟ್ಗಳನ್ನು ತೆಗೆದು ಹಾಕಲಾಗಿತ್ತು. ಉಳಿದಂತೆ ಜುಲೈನಿಂದ ಸೆಪ್ಟೆಂಬರ್ವರೆಗೂ 30 ಲಕ್ಷ ಸಂದೇಶಗಳನ್ನು ಡಿಲೀಟ್ ಮಾಡಲಾಗಿದೆ. ಸದ್ಯ ಇಂತಹ ಕಂಟೆಂಟ್ ತೆಗೆದು ಹಾಕಲು ಹಳೇ ತಂತ್ರಜ್ಞಾನವನ್ನೇ ಉಪಯೋಗಿಸಲಾಗುತ್ತಿದೆ. ಇದರ ಜತೆಗೆ ಹಾನಿಕಾರಕ ಹಾಗೂ ಹಿಂಸಾ ಪ್ರವೃತ್ತಿಯನ್ನು ಪ್ರಚೋದಿಸುವ ವಿಷಯಗಳು ಪೋಸ್ಟ್ ಆಗದಂತೆ ತಡೆಯುವ ತಂತ್ರಜ್ಞಾನವನ್ನು ಸಹ ಈಗ ಬಳಕೆ ಮಾಡಲಾಗುತ್ತಿದ್ದು, ಇನ್ನು ಮುಂದೆ ಯಾರೂ ಇಂತಹ ವಿಷಯಗಳನ್ನು ಪೋಸ್ಟ್ ಮಾಡಲಾಗುವುದಿಲ್ಲ ಎಂದು ಫೇಸ್ಬುಕ್ ಆಡಳಿತ ಮಂಡಳಿ ತಿಳಿಸಿದೆ.
Comments are closed.