ಮನೋರಂಜನೆ

ಕನ್ನಡದ ‘ಮಿಲನ’ ಚಿತ್ರದ ನಟಿ ಪಾರ್ವತಿ ಮೆನನ್ ಮೀಟೂ ಆರೋಪ

Pinterest LinkedIn Tumblr


ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜತೆ ಮಿಲನ ಹಾಗೂ ಪೃಥ್ವಿ ಚಿತ್ರಗಳಲ್ಲಿ ನಟಿಸಿದ್ದ ಪಾರ್ವತಿ ಅವರು ಇದೀಗ ಮೀಟೂ ಆರೋಪ ಮಾಡಿದ್ದಾರೆ.

ಮಾಮಿ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಾತನಾಡಿರುವ ಪಾರ್ವತಿ ಅವರು ಬಾಲ್ಯದಲ್ಲೇ ಲೈಂಗಿಕ ಕಿರುಕುಳ ಎದುರಿಸಿದ್ದೆ. 12 ವರ್ಷಗಳ ಕಾಲ ಈ ಒಂದು ಘಟನೆ ನನ್ನನ್ನು ಕಾಡಿತ್ತು ಎಂದು ಹೇಳಿದ್ದಾರೆ.

ನನ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ನನಗೆ ನಾಲ್ಕು ವರ್ಷವಿರಬಹುದು. 17 ವರ್ಷವಾದ ಮೇಲೆ ನನಗೆ ಅದರ ಅರಿವಾಯಿತು. ಇದರ ಬಗ್ಗೆ ಮಾತನಾಡಲು ಮತ್ತೆ 12 ವರ್ಷ ಹಿಡಿದಿದೆ ಎಂದು ಪಾರ್ವತಿ ಹೇಳಿದ್ದಾರೆ.

ಬಹುಭಾಷಾ ನಟಿ ಪಾರ್ವತಿ ಅವರು ಆಗಾಗೇ ಲೈಂಗಿಕ ಕಿರುಕುಳ ವಿರುದ್ಧ ಧನಿ ಎತ್ತುತ್ತಿದ್ದರು. ಇದೀಗ ತಾವು ಮೀಟೂ ಆರೋಪ ಮಾಡಿದ್ದಾರೆ.

Comments are closed.