ನಮ್ಮ ದೇಶದಲ್ಲಿ ಹುಟ್ಟಿಬೆಳೆದ ಯೋಗ ಪದ್ದತಿ ಇಂದು ಜಗತ್ತಿನಾದ್ಯಂತ ವಿಸ್ತರಿಸಿದೆ. ಯೋಗ ಹೇಗೆ ಮಾಡಬೇಕು, ಏನೆಲ್ಲಾ ಎಚ್ಚರಿಕೆಗಳನ್ನು ಪಾಲಿಸಬೇಕು ಎಂದು ಅದನ್ನು ಶಾಸ್ತ್ರಬದ್ದವಾಗಿ ಹೇಳಿಕೊಡುವ ಶಿಕ್ಷಕರ ಕೊರತೆ ಇಡೀ ಜಗತ್ತಿನಲ್ಲಿದೆ. ಒಟ್ಟು 5 ಲಕ್ಷ ಮಂದಿ ಶಿಕ್ಷಕರ ಅಗತ್ಯ ಇದೆಯಂತೆ. ಮುಂಬರುವ ದಿನಗಳಲ್ಲಿ ಯೋಗ ಶಿಕ್ಷಕರಿಗೆ ಭಾರಿ ಬೇಡಿಕೆ ಇದೆ. ಅದೆಲ್ಲಾ ಬಿಡಿ…ಈಗ ಯೋಗದ ಬಗ್ಗೆ ತಿಳಿದುಕೊಳ್ಳೋಬೇಕಾದ ಕೆಲವು ಸಂಗತಿಗಳು
ಸಾಮಾನ್ಯರು ಸಹ…ಯಾವುದೇ ಖರ್ಚು ಇಲ್ಲದಂತೆ…ದೊಡ್ಡ ದೊಡ್ಡ ಸೌಲಭ್ಯಗಳಿಲ್ಲದಂತೆ ದೈಹಿಕ, ಮಾನಸಿಕ ಆರೋಗ್ಯ ಸಾಧಿಸಲು ಇರುವ ಸಾಧನವಾದ ಕಾರಣ…ಇಡೀ ಜಗತ್ತು ಈಗ ಯೋಗ ಮಾರ್ಗಲ್ಲಿ ನಡೆಯುತ್ತಿದೆ.
1. ವಿಶ್ವಸಂಸ್ಥೆಯಲ್ಲಿ ಒಟ್ಟು 180 ದೇಶಗಳು ಯೋಗ ಸಂಪ್ರದಾಯವನ್ನು, ಅಂತಾರಾಷ್ಟ್ರೀಯ ಯೋಗ ದಿನವನ್ನು ಮುಕ್ತಕಂಠದಿಂದ ಬೆಂಬಲ ಸೂಚಿಸಿವೆ.
2. ಅಮೆರಿಕದಲ್ಲೂ ಯೋಗಾಕ್ಕೆ ಜನಪ್ರಿಯತೆ ಹೆಚ್ಚುತ್ತಿದೆ. 2012ರಲ್ಲಿ ಇಲ್ಲಿ 2.2 ಕೋಟಿ ಮಂದಿ ಯೋಗ ಸಾಧಕರಿರುವುದಾಗಿ ಅಂದಾಜಿಸಲಾಗಿದೆ.
3. ಯೋಗ ಇಂದು ಭಾರಿ ಉದ್ಯಮವಾಗಿ ಅವತರಿಸಿದೆ. ಅಮೆರಿಕಾದಲ್ಲಿ ಇದರ ಆಧಾರವಾಗಿ 27 ಬಿಲಿಯನ್ ಡಾಲರ್ ವ್ಯಾಪಾರ ನಡೆಯುತ್ತಿದೆ.
4. ಜಗತ್ತಿನಾದ್ಯಂತ ಯೋಗ ಸಾಧನೆ ಮೇಲೆ ಆಸಕ್ತಿ ಹೆಚ್ಚುತ್ತಿದೆ. ಈಗ ಯೋಗ ಸಾಧಕರ ಸಂಖ್ಯೆ 200 ಕೋಟಿಗೆ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಇವರು ಎಲ್ಲಾ ದೇಶಗಳಲ್ಲೂ ಹೆಚ್ಚುತ್ತಿರುವುದು ವಿಶೇಷ.
5. ಇಂದು ಆಧುನಿಕ ಜಗತ್ತನ್ನೂ ಆಕರ್ಷಿಸುತ್ತಿರುವ ಯೋಗಕ್ಕೆ ಮೂಲಗಳಿವೆ ಎನ್ನಲು ಕ್ರಿ.ಪೂ 3000ನೇ ವರ್ಷದ ಶಿಲ್ಪಕಲೆಗಳು ಸಿಕ್ಕಿವೆ.
6. ವೇದಗಳು, ಉಪನಿಷತ್ತುಗಳು ಸಹ ಸನಾತನ ಆಲೋಚನೆ ವಿಧಾನದಲ್ಲಿ ಹರಿದು ಹಂಚಿಹೋಗಿದ್ದ ಈ ಸೂತ್ರಗಳನ್ನು ಕ್ರೋಢೀಕರಿಸಿ ಪತಂಜಲಿ ಮಹರ್ಷಿ “ಅಷ್ಟಾಂಗ ಯೋಗ”ವನ್ನು ಕ್ರಿ.ಪೂ 200ರಲ್ಲಿ ರೂಪಿಸಿದರು.
7. ಯೋಗ ವಿಜ್ಞಾನ ಅನಾದಿ ಕಾಲದಿಂದ ಪಾಶ್ಚಾತ್ಯ ದೇಶಗಳಿಗೆ ತಲುಪಿದೆ. ಪ್ರಾಚೀನ ಗ್ರೀಕ್ ನಾಗರಿಕತೆಯಲ್ಲೂ ಈ ಬಗ್ಗೆ ಆಧಾರಗಳು ಲಭ್ಯವಾಗುತ್ತವೆ.

Comments are closed.