
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರವು ಬೀದರ್ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾಗಿದ್ದು ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ನಿರ್ದೇಶನದ ಮೇರೆಗೆ ‘ಭ್ರಷ್ಟಾಚಾರ ನಿರ್ಮೂಲನೆಯ ಮೂಲಕ ನವ್ಯ ಭಾರತ ನಿರ್ಮಾಣ’ ಎಂಬ ವಿಷಯದ ಬಗ್ಗೆ ಅರಿವು ಪರಿವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕಾ ಕಾಲೇಜಿನ ಡೀನ್ ಡಾ| ಎಚ್. ಶಿವಾನಂದ ಮೂರ್ತಿಯವರು ಮಾತನಾಡಿ, ಸಣ್ಣ ರಾಷ್ಟ್ರಗಳಾದ ಸಿಂಗಾಪುರ ಮತ್ತು ಇಸ್ರೇಲ್ ಗಳಲ್ಲಿ ಅಳವಡಿಸಿಕೊಡಂತಹ ಸ್ವಚ್ಛತೆ ಮತ್ತು ಮಾದರಿಯನ್ನು ಭಾರತದಲ್ಲೂ ಕೂಡ ಅನುಸರಿಸಿದರೆ ನಮ್ಮಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧ ಮತ್ತು ಸ್ವಚ್ಛತಾ ಕಾರ್ಯಕ್ರಮಕ್ಕೆ ಬೆಂಬಲ ಕೊಟ್ಟಂತಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭ್ರಷ್ಟತೆಯ ವಿರೂಧ ಪ್ರತಿಜ್ಞೆ ಭೋಧಿಸಿದರು.
ಕೃ.ವಿ.ಕೇಂ.ದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು ಕಾರ್ಯಕ್ರಮದ ಉದ್ದೇಶ ಮತ್ತು ಪ್ರಾಸ್ಥಾವಿಕ ನುಡಿದು ಉಪಸ್ಥಿತ ಅತಿಥಿಗಳನ್ನು ಸ್ವಾಗತಿಸಿದರು. ಈ ಜಾಗೃತಿ ಅರಿವು ಕಾರ್ಯಕ್ರಮವು ಭಾರತೀಯ ಕೃಷಿ ಸಂಶೋದನಾ ಸಂಸ್ಥೆಯ ನಿರ್ದೇಶನದಂತೆ ಹಮ್ಮಿಕೊಂಡಿರುವುದು ಜಿಲ್ಲೆಯ ಜನತೆಗೆ ಮಾಹಿತಿ ರವಾನಿಸಲು ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಇಡೀ ವಾರ ಹಮ್ಮಿಕೋಳ್ಳಲಾಗಿದೆಯೆಂದು ತಿಳಿಸಿದರು.
ಅರಿವು ಕಾರ್ಯಕ್ರಮವನ್ನು ಮಂಗಳೂರಿನ ರಾಮಕೃಷ್ಣಮಠದ ಪೂಜ್ಯಶ್ರೀ ಶ್ರೀ ಏಕಗಮ್ಯನಂದಾಜಿ ಯವರು ಉದ್ಘಾಟಿಸಿ ಮಾತನಾಡಿ ಪತಿಯೊಬ್ಬ ಪ್ರಜೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಕ್ರೀಯ ಪಾತ್ರವಹಿಸಬೇಕೆಂದು ಕರೆನೀಡಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ಮಠವು ಕೈಗೊಂಡಿರುವ ಸ್ವಚ್ಛ ಭಾರತ ಅಭಿಯಾನದಲ್ಲಿ ಎಲ್ಲರೂ ಸಹ ಭಾಗವಹಿಸಿ ದೇಶದ ಸ್ವಚ್ಛತೆ ಮತ್ತು ಏಳಿಗೆಗಾಗಿ ಎಲ್ಲರೂ ಕಾಳಜಿವಹಿಸಬೇಕೆಂದು ಕರೆನೀಡಿದರು.
ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ತಾಂತ್ರಿಕ ಸಲಹೆಗಾರರು, ಮೀನುಗಾರಿಕಾ ಕಾಲೇಜಿನ ಬೋದಕ ಮತ್ತು ಆಡಳಿತ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಭಾಗವಹಿಸಿ ಒಕ್ಕೊರಲಿನಿಂದ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರತಿಜ್ಞೆ ಮಾಡಿದರು.
ಬೇಸಾಯ ಶಾಸ್ತ್ರದ ವಿಜ್ಞಾನಿ ಹರೀಷ್ ಶೆಣೈ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮ ಸಹಾಯಕ ಶ್ರೀ ಸತೀಶ್ ನಾಯಕ್ ವಂದಿಸಿದರು. ಕಾಲೇಜಿನ ಗ್ರಂಥಾಲಯ ಸಹಾಯಕಿ ಕಸ್ತೂರಿ ಪ್ರಾರ್ಥಿಸಿದರು. ಕೃ.ವಿ.ಕೇಂ.ದ ಸಿಬ್ಬಂದಿಗಳಾದ ಯಶಶ್ರೀ, ಕೇಶವ, ಸೋಮಶೇಖರ, ಅಶ್ವಿತ್, ವಿದ್ಯಾವತಿ, ಸೀತಾರಾಮ, ಶಾಂಬವಿ, ಕಸ್ತೂರಿ, ಕಮಲ, ಸದಾಶಿವ, ದಾಮೋದರ ರವರು ಕಾರ್ಯಕ್ರಮ ನಡೆಸಲು ಸಹಕರಿಸಿದರು.
Comments are closed.