
( ಬಿಜೈ ರಾಜ ಕೊಲೆ ಪ್ರಕರಣದ – ಕಡತ ಚಿತ್ರ )
ಮಂಗಳೂರು : ಮಂಗಳೂರಿನಲ್ಲಿ 2012ರಲ್ಲಿ ನಡೆದ ಶೈಲೇಶ್ ಯಾನೆ ಬಿಜೈ ರಾಜ ಕೊಲೆ ಪ್ರಕರಣದ 15 ಆರೋಪಿಗಳನ್ನು ದೋಷಮುಕ್ತಗೊಳಿಸಿ ನ್ಯಾಯಾಲಯವೂ ಆದೇಶ ಹೊರಡಿಸಿದೆ.
ಬಿಜೈ ರಾಜ ಕೊಲೆ ಪ್ರಕರಣದಲ್ಲಿ ಕುಖ್ಯಾತ ರೌಡಿ ಪ್ರದೀಪ್ ಮೆಂಡನ್, ಚಂದು, ಅಚ್ಯುತ, ಸುಬ್ರಹ್ಮಣ್ಯ, ಭರತೇಶ್, ದೀಕ್ಷಿತ್, ಜೈಸನ್ ಡಿಸೋಜ, ಅವಿನಾಶ್, ನಿತೇಶ್‌ಕುಮಾರ್, ವಿಜಯ್, ಸುಶಾಂತ್, ಮಹೇಶ್ ಕೋಡಿಕಲ್, ಗಣೇಶ್, ಚರಣ್ ಶೇಟ್, ವಿಕ್ಕಿ ಅವರನ್ನು ಆರೋಪಿಗಳೆಂದು ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಶಾರದಾ ಬಿ. ಅವರು 15 ಮಂದಿ ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಳಿಕ ವಿದೇಶಗಳಲ್ಲಿ ನೆಲೆಸಿರುವ ಭೂಗತ ದೊರೆಗಳ ಸಹಚರ ಎನ್ನಲಾದ ಪಾಂಡು ಹತ್ಯಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿಜೈ ರಾಜನನ್ನು 2012ರ ಡಿ.1ರಂದು ರಾತ್ರಿ ಮಂಗಳೂರಿನ ಫಳ್ನೀರ್‌ನ ನ್ಯಾಷನಲ್ ಮೆಡಿಕಲ್ ಪಕ್ಕದಲ್ಲಿ ದುಶ್ಕರ್ಮಿಗಳು ತಲವಾರಿನಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೀಶ್ ಸೇರಿದಂತೆ ಆರೋಪಿಗಳ ವಿರುದ್ಧ ಕದ್ರಿ ಠಾಣೆ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಮೂವರು ಆರೋಪಿಗಳಾದ ಅವಿನಾಶ್, ಜೈಸನ್ ಹಾಗೂ ವಿಕ್ಕಿ ವಿಚಾರಣೆ ಮುಗಿಯುವ ಮೊದಲು ಸಾವಿಗೀಡಾಗಿದ್ದಾರೆ. ಭೂಗತದೊರೆ ರವಿ ಪೂಜಾರಿ ಹಾಗೂ ಕಲಿ ಯೋಗೀಶ್ ಇನ್ನೂ ಬಂಧನವಾಗಿಲ್ಲ. ಪ್ರಾಸಿಕ್ಯೂಷನ್ ಘಟನೆಯನ್ನು ಸಾಬೀತುಪಡಿಸಲು ವಿಫಲವಾದ ಹಿನ್ನೆಲೆ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.
Comments are closed.