ಕಪೂರಥಲಾ: ಯುವತಿಯೋರ್ವಳ ಮೇಲೆ ಒಂದೇ ದಿನ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಪಂಜಾಬಿನ ಕಪೂರಥಲಾ ಎಂಬಲ್ಲಿ ನಡೆದಿದೆ.
ಯುವತಿ ಮೇಲೆ ಮೊದಲು ಬಾರಿ ನಡೆದ ಸಾಮೂಹಿಕ ಅತ್ಯಾಚಾರ ಕೃತ್ಯದಲ್ಲಿ ಆಕೆಯ ಬಾಯ್‌ಫ್ರೇಂಡ್ ಸೇರಿದಂತೆ 6 ಜನ ಶಾಮೀಲಾಗಿದ್ದರೆ, ಎರಡನೇ ಬಾರಿ ನಡೆದ ಅತ್ಯಾಚಾರದಲ್ಲಿ ನಾಲ್ವರು ಕಾಮುಕರು ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ಮಾದಕ ವ್ಯಸನಿಯಾಗಿರುವ ಕಾರಣ ಕಳೆದ ಐದು ತಿಂಗಳ ಹಿಂದೆ ಇಬ್ಬರು ಅಪರಿಚಿತ ಡ್ರಗ್ ಪೂರೈಕೆದಾರರ ಸ್ನೇಹ ಬೆಳೆಸಿದ್ದೆ. ಅವರು ಸಂಚು ರೂಪಿಸಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಜಲಂಧರ್ ಮೂಲದ 24 ವರ್ಷದ ಯುವತಿ ಆರೋಪಿಸಿದ್ದಾಳೆ.
ಅದೇ ದಿನ ತನ್ನ ಮೇಲೆ ನಡೆದ ಸಮೂಹಿಕ ಅತ್ಯಾಚರದ ಕುರಿತು ಪರಿಚಯಸ್ಥರೊಬ್ಬರ ಬಳಿ ಹೇಳಿಕೊಂಡೆ. ಆತ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸೋಣ ಎಂದು ಪುಸಲಾಯಿಸಿ ಬೇರೊಂದು ಕಡೆ ಕರೆದೊಯ್ದು ಮೂವರು ಸ್ನೇಹಿತರ ಜತೆ ಸೇರಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ಒಂದೇ ದಿನ ಎರಡೆರಡು ಬಾರಿ ಗ್ಯಾಂಗ್ ರೇಪ್‌ಗೆ ಬಲಿಯಾದೆ ಎಂದು ಯುವತಿ ಅಳಲು ತೊಡಿಕೊಂಡಿದ್ದಾಳೆ.
ಸಂತ್ರಸ್ತೆಯ ದೂರಿನನ್ವಯ ನಾಲ್ವರು ಕಾಮುಕರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ 6 ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Comments are closed.