
ತಿರುವನಂತಪುರಂ: ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್ ನೀಡಿದ ಆದೇಶಕ್ಕೆ ಕೇರಳಾದ್ಯಂತ ಹಿಂದೂ ಸಮುದಾಯದಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ.
ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಕೇರಳ ಸರಕಾರ ಸರಿಯಾದ ರೀತಿಯಲ್ಲಿ ವಾದ ಮಂಡಿಲಿಲ್ಲ ಎಂದು ಶಬರಿಮಲ ಅಯ್ಯಪ್ಪ ಸೇವಾ ಸಮಾಜಮ್ ಸೇರಿದಂತೆ ಹಲವು ಹಿಂದೂ ಧಾರ್ಮಿಕ ಸಂಘಟನೆಗಳು ಆರೋಪಿಸಿವೆ. ಕೇರಳ ಸರಕಾರ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದೆ ಎಂಬುದು ಇವರ ಆಪಾದನೆಯಾಗಿದೆ.
ಸುಪ್ರೀಂಕೋರ್ಟ್ನ ತೀರ್ಪಿನ ಮರುಪರಿಶೀಲನೆಗೆ ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಕೇರಳ ಸರಕಾರ ಹಾಗೂ ಟ್ರಾವನ್ಕೋರ್ ದೇವಸ್ವೋಮ್ ಬೋರ್ಡ್ಗೆ ನಿವೇದನೆ ಮಾಡಿಕೊಂಡಿವೆ. ಇದಕ್ಕೂ ಮುನ್ನ ಸಾವಿರಾರು ಅಯ್ಯಪ್ಪ ಭಕ್ತರು ಬೃಹತ್ ಮೆರವಣಿಗೆ ನಡೆಸಿದರು.
ಹೆಂಗಸರೂ ಕೂಡ ಬೃಹತ್ ಸಂಖ್ಯೆಯಲ್ಲಿ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಸಾಂಪ್ರದಾಯಿಕವಾಗಿ ಹೆಂಗಸರ ಪ್ರವೇಶಕ್ಕೆ ನಿರ್ಬಂಧವಿದೆ. ಈ ನಿರ್ಬಂಧವನ್ನೇ ಸುಪ್ರೀಂಕೋರ್ಟ್ ಈಗ ಕಿತ್ತುಹಾಕಿ ಆದೇಶ ಹೊರಡಿಸಿದೆ. ಆದರೆ, ದೇಗುಲದ ಸಂಪ್ರದಾಯಕ್ಕೆ ಬಹುತೇಕ ಹಿಂದೂ ಹೆಣ್ಮಕ್ಕಳು ಬೆಂಬಲ ನೀಡಿ, ಸುಪ್ರೀಂ ಆದೇಶವನ್ನು ವಿರೋಧಿಸುತ್ತಿರುವುದು ಗಮನಾರ್ಹ.
Comments are closed.