
ರಾಜಕೋಟ್: ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ಕೆಲ ಸನ್ನಿವೇಶಗಳು ಹಾಸ್ಯಾತ್ಮಕವಾಗಿದ್ದು ನೋಡುಗರಿಗೆ ಸಖತ್ ಖುಷಿ ನೀಡಿದೆ.
https://youtu.be/jsAULu4E_Fk
ವಿಂಡೀಸ್ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು 92 ರನ್ ಗಳಿಸಿದ್ದು ಆತುರಪಟ್ಟು ಶತಕ ಸಿಡಿಸುವ ಅವಕಾಶದಿಂದ ವಂಚಿತರಾದರು. ಆದರೆ ಭರ್ಜರಿ ಬ್ಯಾಟಿಂಗ್ ಮೂಲಕ ತಾವು ಉತ್ತಮ ಬ್ಯಾಟ್ಸ್ ಮನ್ ಅಂತ ಸಾಬೀತುಪಡಿಸಿದರು.
ಈ ಮಧ್ಯೆ ರಿಷಬ್ ಪಂತ್ 63 ರನ್ ಗಳಿಸಿದ್ದಾಗ ಚೇಸ್ ಎಸೆತದಲ್ಲಿ ಚೆಂಡನ್ನು ಎದುರಿಸಿದರು. ಆದರೆ ಚೆಂಡು ಬ್ಯಾಟ್ ಗೆ ತಲುಗಿ ವಿಕೆಟ್ ಕಡೆ ತೆರಳಿದ್ದರಿಂದ ಔಟಾಗುವ ಭಯದಿಂದ ಮತ್ತೊಮ್ಮೆ ರಿಷಬ್ ಚೆಂಡನ್ನು ಹೊಡೆಯಲು ಮುಂದಾದರೂ ಆದರೆ ಅದು ಸಫಲವಾಗಿಲ್ಲ. ಅದೃಷ್ಟವೆಂಬಂತೆ ಚೆಂಡು ಸಹ ವಿಕೆಟ್ ಕೆ ಬಡಿಯಲಿಲ್ಲ. ಅಂತು ಒಂದು ಚೆಂಡನ್ನು ಎರಡೆರಡು ಬಾರಿ ಹೊಡೆಯಲು ಮುಂದಾದ ರಿಷಬ್ ರ ಕೆಲಸ ಮಾತ್ರ ಹಾಸ್ಯಾತ್ಮಕವಾಗಿತ್ತು.
Comments are closed.