ಕರಾವಳಿ

ಹೊನ್ನಾವರ: ಭೀಕರ ರಸ್ತೆ ಅಪಘಾತಕ್ಕೆ ಬಾಲಕಿ ಸೇರಿದಂತೆ ಐವರ ಸಾವು

Pinterest LinkedIn Tumblr


ಕಾರವಾರ: ಹೊನ್ನಾವರ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಸ್ಥಳದಲ್ಲೇ ಬಾಲಕಿ ಸೇರಿದಂತೆ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ

ಹೊನ್ನಾವರದ ಕರ್ಕಿ ಬಳಿ ಘಟನೆ ನಡೆದಿದ್ದು, ಟೆಂಪೊ – ಗ್ಯಾಸ್ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದೆ. ಸಾವನ್ನಪ್ಪಿದವರು ಕುಮಟಾ ಬಗ್ಗೋಣದ ಕಮಲಾಕರ ಭಂಡಾರಿ,ಹೊನ್ನಾವರ ಕರ್ಕಿಯ ಮೋಹನ ಮೇಸ್ತ, ಕುಮಟಾ ನಾಗೂರಿನ ಸಮಂತ ಮಡಿವಾಳ, ಹೊನ್ನಾವರದ ನಾಗರಾಜ ನಾಯ್ಕ, ಸಿಂಚನಾ ಮಡಿವಾಳ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟೆಂಪೋ ಸಂಪೂರ್ಣ ಜಖಂಗೊಂಡಿದ್ದು, ಘಟನಾ ಸ್ಥಳಕ್ಕೆ ಪೊಲೀರು ಆಗಮಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.ದೂರುಗಳು ‘ಸೇಡಿಗಾಗಿ’ ಕಾನೂನು ದುರ್ಬಳಕೆ ಸಲ್ಲದು: ಸುಪ್ರೀಂ ಕೋರ್ಟ್

ನವದೆಹಲಿ: ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ಬಂಧನ ಮಾಡಬಾರದೆನ್ನುವ ತನ್ನ ಹಿಂದಿನ ತೀರ್ಪನ್ನು ಮಾರ್ಪಾಡುಗೊಳಿಸಿ ಶುಕ್ರವಾರ ಆದೇಶಿಸಿದ್ದ ಸುಪ್ರೀಂ ಕೋರ್ಟ್ ಇಂದು (ಶನಿವಾರ) “ಸಿಟ್ಟು” ಹಾಗೂ “ಸೇಡ”ನ್ನು ಹಿನ್ನೆಲೆಯಾಗಿಟ್ಟುಕೊಂಡು ತಾನು ನೀಡಿದ ತೀರ್ಪನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಎಚ್ಚರಿಸಿದೆ.
ಎಂತಹಾ ಪರಿಸ್ಥಿತಿಯಲ್ಲಿಯೂ ನ್ಯಾಯಾಲಯಗಳು ತಮ್ಮ ಕಣ್ಣು, ಕಿವಿಗಳನ್ನು ಸದಾ ತೆರೆದಿಡಲಿವೆ. ಸಂತ್ರಸ್ಥರ ಹೆಸರಲ್ಲಿ ಅನುಕಂಪ ಗಿತ್ಟಿಸಿಕೊಂಡು ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮತ್ತು ಡಿ.ಯು.ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಹೇಳಿದೆ.
ವಿವಾಹಿತ ಸ್ತ್ರೀ ಮೇಲೆ ನಡೆಯುವ ದೌರ್ಜನ್ಯ ತಡೆಗಾಗಿ 1983ರಲ್ಲಿಯೇ ಐಪಿಸಿ ಸೆಕ್ಷನ್ 498ಎ ಅನ್ನು ಅನುಷ್ಠಾನಗೊಳಿಸಲಾಗಿದೆ. ಅದರೆ ಮಹಿಳೆ ಹಾಗೂ ಅವರ ಕಡೆಯವರು ಈ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಗಂಡಂದಿರ ಮೇಲೆ ಕೌಟುಂಬಿಕ ದೌರ್ಜನ್ಯ ತಡೆಯುವುದಕ್ಕೆ ಹಾಗೂ ಪುರುಷರಿಗೆ ರಕ್ಷಣೆ ಒದಗಿಸಲು ಹೊಸ ಕಾನೂನು ಅಗತ್ಯವಿದೆ. ಸೆಕ್ಷನ್ 498ಎ ಅಡಿಯಲ್ಲಿನ “ಕಿರುಕುಳ” ಎನ್ನುವ ಶಬ್ದ ಅತ್ಯಂತ ಸೂಕ್ಷ್ಮ ಪದವಾಗಿದ್ದು ಪೋಲೀಸರ ಉತ್ಪ್ರೇಕ್ಷೆಯ ಕಾರಣದಿಂದ ವಿನಾಕಾರಣ ಗಂಡಂದಿರು ಜೈಲುಪಾಲಾಗುವ ಸಾಧ್ಯತೆ ಇದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಹೀಗಾಗಿ ಕಾನೂನು ದುರ್ಬಳಕೆ ಆಗದಂತೆ ಸೂಕ್ತ “ಸಂರಕ್ಷಣಾ ಕ್ರಮ” ಗಳನ್ನು ಜಾರಿಗೆ ತರಬೇಕೆಂದು ನ್ಯಾಯಾಲಯ ಹೇಳಿದೆ.

……………………….
ಸಿಬಿಎಸ್ಇ ಟಾಪರ್ ಅತ್ಯಾಚಾರ ಪ್ರಕರಣದಲ್ಲಿ ಸೇನಾ ಯೋಧ
ಮಹೇಂದ್ರಗಢ: 2018ನೇ ಸಾಲಿನ ಸಿಬಿಎಸ್ ಇ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಅಗ್ರ ಸ್ಥಾನ ಪಡೆದಿದ್ದ ಹರ್ಯಾಣ ಮೂಲದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಸ್ಫೋಟಕ ಮಾಹಿತಿಯೊಂದು ಬಹಿರಂಗಗೊಂಡಿದ್ದು, ಸೇನಾ ಸಿಬ್ಬಂದಿಒಯೂ ಗ್ಯಾಂಗ್ ರೇಪ್ ನಲ್ಲಿ ಶಾಮೀಲಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಹರ್ಯಾಣ ಡಿಜಿಪಿ ಬಿಎಸ್ ಸಂಧು ಈ ಬಗ್ಗೆ ಮಾಹಿತಿ ನೀಡಿದ್ದು, ಒಟ್ಟಾರೆ ಮೂವರು ಆರೋಪಿಗಳ ಪೈಕಿ ಸೇನಾ ಯೋಧನೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂದು ಹೇಳಿದ್ದು ಆತನನ್ನು ಬಂಧಿಸಲು ರಾಜಸ್ಥಾನಕ್ಕೆ ಪೊಲೀಸರ ತಂಡ ತೆರಳಿದೆ ಎಂದಿದ್ದಾರೆ.
ಪ್ರಕರಣದ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ನಡೆದಿದ್ದು, ಶೀಘ್ರವೇ ಎಲ್ಲಾ ಆರೋಪಿಗಳನ್ನೂ ಹೆಡೆಮುರಿಕಟ್ಟಲಾಗುತ್ತದೆ ಎಂದು ಹರ್ಯಾಣ ಡಿಜಿಪಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪರಿಚಿತರಿಂದಲೇ 19 ವರ್ಷದ ಯುವತಿ ಅತ್ಯಾಚಾರಕ್ಕೊಳಗಾಗಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.

ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಪಾನೀಯದಲ್ಲಿ ಆಕೆಗೆ ಮತ್ತು ಬರುವ ವಸ್ತುವನ್ನು ಬೆರೆಸಿ ಈ ಕೃತ್ಯ ಎಸಗಲಾಗಿದೆ. ಸಂತ್ರಸ್ಥ ಯುವತಿ ಹೇಳಿಕೊಂಡಿರುವಂತೆ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾದ ಈಕೆ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ದುಷ್ಕರ್ಮಿಗಳು ಆಕೆಯನ್ನು ಅಪಹರಿಸಿ, ನಿರ್ಜನ ಪ್ರದೇಶದಲ್ಲಿದ್ದ ಹೊಲಕ್ಕೆ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸಂತ್ರಸ್ತೆಯ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಮೂವರೂ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

Comments are closed.