ಚ್ಯೂಯಿಂಗ್ ಗಮ್ ಮಕ್ಕಳಿಂದ ವೃದ್ಧರವರೆಗೂ ಬಹಳಷ್ಟು ಜನರಿಗೆ ಇಷ್ಟವಾಗುವ ಒಂದು ಮಿಠಾಯಿ. ಇದು ತಿನ್ನುವುದು ಆರೋಗ್ಯಕ್ಕೆ ಉತ್ತಮ, ಮತ್ತು ತೂಕ ಇಳಿಕೆಗೆ ಸಹಾಯಕಾರಿ ಎಂದು ನಾವೆಲ್ಲ ತಿಳಿದುಕೊಂಡಿರುತ್ತೇವೆ. ಆದ್ರೆ ಅದೇ ಚ್ಯೂಯಿಂಗ್ ಗಮ್ ಆರೋಗ್ಯಕ್ಕೂ ಮಾರಕ ಎಂಬುವುದು ನಿಮಗೆ ಗೊತ್ತೇ?
ಬನ್ನಿ; ಚ್ಯೂಯಿಂಗ್ ಗಮ್ ನಿಂದ ಆರೋಗ್ಯಕ್ಕೆ ಆಗುವ ಹಾನಿಯ ಬಗ್ಗೆ ತಿಳಿದುಕೊಳ್ಳೋಣ;
ಟೆಂಪೊರೋಮ್ಯಾಂಡಿಬ್ಯುಲರ್ ಸಂಧಿ ಸಮಸ್ಯೆ:
Temporomandibular joint disorder (TMD) – Temporomandibular joint ಅಂದರೆ ದವಡೆಯ ಮೂಳೆ(mandible)ಯನ್ನು ತಲೆಬುರುಡೆಗೆ ಸೇರಿಸುವಂತಹ ಮೂಳೆ. ವಿಪರೀತ ಚ್ಯೂಯಿಂಗ್ ಗಮ್ ಅಗಿಯುವುದರಿಂದ ಕೆನ್ನೆಯ ಭಾಗದಲ್ಲಿರುವ ಸ್ನಾಯುಗಳು ಸಂಕುಚಿತಗೊಳ್ಳಬಹುದು ಅದರಲ್ಲೂ ನೀವು ಬಾಯಿಯ ಒಂದೇ ಬದಿಯಲ್ಲಿ ಜಗಿಯುತ್ತಿದ್ದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.ಇದು ಟೆಂಪೊರೋಮ್ಯಾಂಡಿಬ್ಯುಲರ್ ಸಂಧಿ ಸಮಸ್ಯೆ (TMD)ಗೆ ಕಾರಣವಾಗುತ್ತದೆ. ಇದರಿಂದ ದವಡೆಯಲ್ಲಿ ದೀರ್ಘಕಾಲದ ನೋವು, ದವಡೆಯ ಸ್ನಾಯುಗಳಲ್ಲಿ ಬಿಗಿಯಾಗುವಿಕೆ ಮತ್ತು ಉರಿ, ಕಿವಿ ನೋವು, ಹಲ್ಲು ನೋವು ಮತ್ತು ಮೈಗ್ರೇನ್ ತಲೆನೋವು ಉಂಟಾಗುತ್ತದೆ.
ಚ್ಯೂಯಿಂಗ್ ಗಮ್ ದೇಹ ತೂಕ ಇಳಿಸಲು ಸಹಾಯಕಾರಿಯೇ?
ಹುಳುಕು ಹಲ್ಲು:
ಚ್ಯೂಯಿಂಗ್ ಗಮ್ ಗಳಲ್ಲಿ ಸಾಮಾನ್ಯವಾಗಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ. ಇದನ್ನು ದೀರ್ಘಕಾಲ ಮೆಲ್ಲುವುದರಿಂದ ನಿಮ್ಮ ಹಲ್ಲುಗಳಲ್ಲಿ ಸಕ್ಕರೆಯು ಸೇರಿಕೊಳ್ಳುವುದರಿಂದ ಹಲ್ಲುಗಳು ಹುಳುಕಾಗುವ ಸಾಧ್ಯತೆಗಳಿವೆ.ಜೊತೆಗೆ ಹಲ್ಲುಗಳ ಸವೆತವೂ ಉಂಟಾಗಬಹುದು. ಸಕ್ಕರೆ ಹಲ್ಲುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇರಿದರೆ ಹಲ್ಲುಗಳಲ್ಲಿ ಕ್ಯಾಲ್ಶಿಯಂನ ಕೊರತೆ(de calcification) ಉಂಟಾಗಿ, ಸವೆತಕ್ಕೆ ಕಾರಣವಾಗುತ್ತದೆ.ಕೃತಕ ಸಿಹಿಯಿಂದನೂ ಈ ಸಮಸ್ಯೆ ಉಂಟಾಗುತ್ತದೆ, ಯಾಕೆಂದರೆ ಕೃತಕ ಸಿಹಿಯಲ್ಲಿ ಆ್ಯಸಿಡಿಕ್ ಅಂಶಗಳು ಹೆಚ್ಚಾಗಿರುತ್ತವೆ.
ಜಠರದ ಕರುಳಿನ ಸಮಸ್ಯೆ:
ಚ್ಯೂಯಿಂಗ್ ಗಮ್ ಮೆಲ್ಲುವುದರಿಂದ ಜಠರಗರುಳಿನ(gastrointestinal (GI) tract) ಒಳಗಡೆ ಗಾಳಿಯ ಹರಿಯುವಿಕೆ ಹೆಚ್ಚಾಗುತ್ತದೆ.ಇದರಿಂದ ಹೊಟ್ಟಯುಬ್ಬರ ಮತ್ತು ಹೊಟ್ಟಯೊಳಗೆ ಸೆಳೆತ ಉಂಟಾಗುತ್ತದೆ.ಅಲ್ಲದೆ ಇದು, ಇರ್ರಿಟೇಬಲ್ ಬೋವ್ಲ್ ಸಿಂಡ್ರೋಮ್ (irritable bowel syndrome (IBS)) ಅಂದರೆ ಕರುಳಿನ ತೊಂದರೆಯಿಂದ ಬಳಲುವ ರೋಗಿಗಳಲ್ಲಿ ರೋಗ ಉಲ್ಬಣಗೊಳ್ಳಲು ಕಾರಣವಾಗುತ್ತದೆ.

Comments are closed.