
ಲಕ್ನೋ (ಸೆ.14): ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಭೀಕರ ಜ್ವರ ಕಾಣಿಸಿಕೊಂಡಿದ್ದು, ಕಳೆದ ಕೆಲವು ವಾರಗಳು 40ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಅನಧಿಕೃತವಾಗಿ 100ಕ್ಕೂ ಹೆಚ್ಚು ಜನರು ಈ ಜ್ವರಕ್ಕೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ನಿಗೂಢ ಜ್ವರ ಬಢೂನ್ ಜಿಲ್ಲೆಯಲ್ಲಿಯೂ ಕಾಣಿಸಿಕೊಂಡಿದೆ.
ಬರೇಲಿಯಲ್ಲಿ ಅಧಿಕ ಮಳೆಯಾಗಿದ್ದು, ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಲುಷಿತ ನೀರಿನಿಂದಾಗಿ ಕಾಯಿಲೆಗಳು ಹರಡುತ್ತಿದ್ದು, ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ದೆಹಲಿ ಮತ್ತು ಲಕ್ನೋನಿಂದ ವೈದ್ಯರು ತಂಡ ಆಗಮಿಸಿದೆ.
ಮಜಗಾವ್ ಬ್ಲಾಕ್ನಲ್ಲಿ ಪ್ಲಸ್ಮೋಡಿಯಂ ಫಲ್ಕಿಪರಂ(ಫಿಎಫ್) ಮಲೇರಿಯಾ ಸೋಂಕು ಇರುವುದನ್ನು ರಾಜ್ಯ ತುರ್ತು ನಿರ್ವಹಣಾ ತಂಡ ಪತ್ತೆ ಹಚ್ಚಿದ್ದು, ಇದು ಅತಿ ಹೆಚ್ಚು ಸಾವು ನೋವಿಗೆ ಕಾರಣವಾಗಿದೆ ಎನ್ನಲಾಗಿದೆ.
ಪಿಎಫ್ ಮಲೇರಿಯಾ ಭಯಂಕರ ಮಲೇರಿಯಾ ರೋಗವಾಗಿದ್ದು, ಚಿಕಿತ್ಸೆ 24ಗಂಟೆ ವಿಳಂಬವಾದರೆ ಜೀವಕ್ಕೆ ಇದು ಕುತ್ತು ತರಲಿದೆ. 15ದಿನದಲ್ಲಿ 40 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಪಿಕೆ ಜೈನ್ ಅವರನ್ನು ವಜಾಗೊಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶ ಆರೋಗ್ಯ ಸಚಿವರಾದ ಸಿದ್ಧಾರ್ಥ ನಾಥ್ ಸಿಂಗ್, ಯಾವಾಗ ಜ್ವರ ಕಾಣಿಸಿಕೊಳ್ಳುತ್ತದೆಯೋ ಆಗ ಸರ್ಕಾರ ನೀಡಿರುವ ವೈದ್ಯಕೀಯ ಕಿಟ್ ಬಳಸಿ, ಪರೀಕ್ಷಿಸಿ, ಅದು ನಿಮಗೆ ಯಾವಾಗ ರೋಗ ಇದೆ ಎಂಬ ಸುಳಿವು ನೀಡಲಿದೆ ಎಂದರು.
Comments are closed.