ಮನೋರಂಜನೆ

ವಿಶಿಷ್ಟ ರೀತಿಯ ಪೋಸ್ಟರ್‌ಗಳಿಂದ ಗಮನಸೆಳೆದಿರುವ ಬಾಲಿವುಡ್ ಚಿತ್ರ ‘Badhaai Ho’

Pinterest LinkedIn Tumblr


ಅಮಿತ್ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ ‘ಬಡಾಯಿ ಹೋ’ ಸಿನಿಮಾ ತನ್ನ ವಿಭಿನ್ನ ಪೋಸ್ಟರ್‌ಗಳ ಮೂಲಕ ಗಮನಸೆಳೆದಿದೆ. ಆಯುಷ್ಮಾನ್ ಖುರಾನಾ ಮತ್ತು ಸನ್ಯಾ ಮಲ್ಹೋತ್ರಾ ತಾರಾಗಣದ ಈ ಚಿತ್ರದ ಟ್ರೇಲರ್ ಸೆಪ್ಟೆಂಬರ್ 11ರಂದು ಬಿಡುಗಡೆಯಾಗುತ್ತಿದೆ.

ಇಂದು (ಸೆಪ್ಟೆಂಬರ್ 10) ಮೂರು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ ಆಯುಷ್ಮಾನ್ ಮತ್ತುಸನ್ಯಾ. ಈ ಮೂರು ಪೋಸ್ಟರ್‌ಗಳು ಚಿತ್ರದ ಮೂರು ಮುಖ್ಯ ಪಾತ್ರಗಳನ್ನು ಪರಿಚಯಿಸಿವೆ. ಬಾಲಿವುಡ್ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟರ್‌ನಲ್ಲಿ ಆಯುಷ್ಮಾನ್, ಸನ್ಯಾ ಮತ್ತು ಗಜರಾಜ್ ರಾವ್ ಚಿನ್ನ ಮಕ್ಕಳಂತೆ ಕಾಣಿಸಿರುವುದು ತಮಾಷೆಯಾಗಿದೆ. ಜಂಗ್ಲಿ ಪಿಕ್ಚರ್ಸ್ ಜತೆಗೆ ಆಯುಷ್ಮಾನ್ ಖುರಾನಾ ಈ ಹಿಂದೆ ಬರೇಲಿ ಕಿ ಬರ್ಫಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಈ ಕಾಂಬಿನೇಷನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದು.
ಹಾಸ್ಯ, ರೊಮ್ಯಾನ್ಸ್ ಭರಿತ ಈ ಸಿನಿಮಾವನ್ನು ಜಂಗ್ಲಿ ಪಿಕ್ಚರ್ಸ್ ಮತ್ತು ಕ್ರೋಮ್ ಪಿಕ್ಚರ್ಸ್ ಲಾಂಛನದಲ್ಲಿ ವಿನೀತ್ ಜೈನ್, ಹೇಮಂತ್ ಭಂಡಾರಿ ಮತ್ತು ಅಲೆಯಾ ಸೇನ್ ನಿರ್ಮಿಸಿದ್ದಾರೆ. ಅಕ್ಟೋಬರ್ 19ರಂದು ಚಿತ್ರ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ನೆಲೆಗೊಂಡಿದೆ.

Comments are closed.