
ಮುಂಬಯಿ: ರಾಫೆಲ್ ಡೀಲ್ ಪ್ರಕರಣ ಸಂಬಂಧ ಹಣಕಾಸು ಸಚಿವ ಅರುಣ್ ಜೈಟ್ಲಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ನಡೆಯುತ್ತಿರುವ ವಾಕ್ ಸಮರ ಮುಂದುವರಿದಿದ್ದು, ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಸತ್ಯ ಹೊರಬರಬೇಕು ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್ ಅಂಬಾನಿ, ಸತ್ಯವಷ್ಟೇ ಮಾತ್ರ ಹೊರಬರಬೇಕು. ರಾಹುಲ್ ಗಾಂಧಿ ಅವರಿಗೆ ನಾನು ಖಾಸಗಿಯಾಗಿ ಬರೆದಿದ್ದೇನೆ,. ರಾಫೆಲ್ ಡೀಲ್ ಬಗ್ಗೆ ಕಾಂಗ್ರೆಸ್ ದುದ್ದೇಶ ಪೂರ್ವಕವಾಗಿ, ಸ್ವಹಿತಾಸಕ್ತಿಯಿಂದಾಗಿ ದಾರಿ ತಪ್ಪಿಸುತ್ತಿದೆ ಎಂದು ಹೇಳಿದ್ದಾರೆ.
ರಿಲಯನ್ಸ್ ಮತ್ತು ದಾಸಾಲ್ಟ್ ಏವಿಯೇಷನ್ ನಡುವೆ ನಡೆದ ಒಪ್ಪಂದದಲ್ಲಿ ಕೇಂದ್ರದ ಪಾತ್ರವಿಲ್ಲ, ಕಾಂಗ್ರೆಸ್ ಸುಖಾ ಸುಮ್ಮನೆ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಮುಖವಾಣಿ ನ್ಯಾಷನಲ್ ಹೆರಾಲ್ಡ್ ವಿರುದ್ಧ 5 ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅನಿಲ್ ಅಂಬಾನಿ ತಿಳಿಸಿದ್ದಾರೆ.
ಅನಿಲ್ ಅಂಬಾನಿ ನ್ಯಾಷನಲ್ ಹೆರಾಲ್ಡ್ ವಿರುದ್ಧ 2 ದೂರು ದಾಖಲಿಸಿದ್ದಾರೆ, ಲೇಖನ ಬರೆದ ಲೇಖಕ ಮತ್ತು ಸಂಪಾದಕರ ವಿರುದ್ಧ ಕೇಸ್ ಮತ್ತು ಗುಜರಾತ್ ಕಾಂಗ್ರೆಸ್ ಮುಖಂಡ ಶಕ್ತಿ ಸಿನ್ಹಾ ಗೆಯ್ಲಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ರಕ್ಷಣ ಇಲಾಖೆಯಿಂದ ತಾವು ಯಾವುದೇ ಸಂಪರ್ಧ ಪಡೆದುಕೊಂಡಿಲ್ಲ, ಆಧಾರ ರಹಿತ ಆರೋಪವನ್ನು ಮಾಡುತ್ತಿರುವ ಕಾಂಗ್ರೆಸ್ ಪ್ರಕರಣದ ದಾರಿ ತಪ್ಪಿಸುತ್ತಿದೆ ಎಂದು ಹೇಳಿದ್ದಾರೆ.
Comments are closed.