ರಾಷ್ಟ್ರೀಯ

ರಾಖಿ ಕಟ್ಟಿದ ಸಹೋದರಿಗೆ 2 ಸಾವಿರ ಕೊಟ್ಟ ಪತಿ: ಪತ್ನಿಯಿಂದ ಆತ್ಮಹತ್ಯೆಗೆ ಯತ್ನ

Pinterest LinkedIn Tumblr


ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತಿಯೊಂದಿಗೆ ಜಗಳವಾಡಿದ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ರಕ್ಷಾಬಂಧನ ಹಬ್ಬದ ಹಿನ್ನೆಲೆ ರಾಖಿ ಕಟ್ಟಿದ ಸಹೋದರಿಗೆ 2 ಸಾವಿರ ರೂ. ಉಡುಗೊರೆ ನೀಡಿದ್ದಕ್ಕೆ ಪತಿಯೊಂದಿಗೆ ಪತ್ನಿ ಜಗಳವಾಡಿದ್ದಳು ಎಂದು ತಿಳಿದುಬಂದಿದೆ.

ಪತಿಯೊಂದಿಗೆ ಜಗಳವಾಡಿದ ಪತ್ನಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ನೋಡಿದ ಪತಿ ಆಶಿಶ್‌, ಆಕೆಯನ್ನು ತಕ್ಷಣವೇ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಸೇರಿಸಿದ್ದಾರೆ. ಇನ್ನು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಆಶಿಶ್‌, ತನ್ನ ಪತ್ನಿ ಹಾಗೂ ಪೋಷಕರ ಜತೆ ಕಾನ್ಪುರದ ಗೋವಿಂದ ನಗರದಲ್ಲಿ ವಾಸವಾಗಿದ್ದಾರೆ.

ಆಶಿಶ್‌ ಸಹೋದರಿ ಭಾನುವಾರ ರಾಖಿ ಕಟ್ಟಲು ಆತನ ಮನೆಗೆ ಹೋಗಿದ್ದರು. ರಾಖಿ ಕಟ್ಟಿದ್ದಕ್ಕೆ ಆಶಿಶ್‌ ಸಹೋದರಿಗೆ ಎರಡು ಸಾವಿರ ರೂ. ಹಣ ನೀಡಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ ತನ್ನ ಪತಿಯ ಜತೆ ಜಗಳವಾಡಿದ್ದು, ನಂತರ ರೂಂ ಲಾಕ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ನಂತರ, ಪತಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ರಕ್ಷಾಬಂಧನ ಹಿನ್ನೆಲೆ ಸಹೋದರಿಗೆ ಉಡುಗೊರೆ ನೀಡಿದ್ದಕ್ಕೆ ಕವಿತಾ ತನ್ನ ಪತಿಯ ಜತೆ ಜಗಳವಾಡುತ್ತಿದ್ದರು. ನಂತರ, ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ನೆರೆ ಹೊರೆಯವರು ಮಾಹಿತಿ ನೀಡಿದ್ದಾರೆ. ಆದರೆ ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯಲ್ಲಿ ಯಾವುದೂ ದೂರು ದಾಖಲಾಗಿಲ್ಲ ಎಂದು ಗೋವಿಂದನಗರದ ಸ್ಟೇಷನ್‌ ಹೌಸ್ ಆಫೀಸರ್ ಸಂಜೀವ್ ಕಾಂತ್ ಮಿಶ್ರಾ ತಿಳಿಸಿದ್ದಾರೆ.

Comments are closed.