ರಾಷ್ಟ್ರೀಯ

ತನ್ನ ಸ್ನೇಹಿತರಿಗೆ ಪಾರ್ಟಿ ನೀಡಲು ಹಣ ಬೇಕೆಂದು ದರೋಡೆಕೋರನಾದ ದಿಲ್ಲಿ ವಿವಿ ವಿದ್ಯಾರ್ಥಿ

Pinterest LinkedIn Tumblr


ಹೊಸದಿಲ್ಲಿ: ತನ್ನ ಸ್ನೇಹಿತರಿಗೆ ಪಾರ್ಟಿ ನೀಡಲು ಹಣ ಬೇಕೆಂದು ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ದರೋಡೆಕೋರನಾಗಿ ಬದಲಾಗಿದ್ದಾನೆ. ಆರೋಪಿ ವಿಶಾಲ್ (24)ತಾನು ಕದ್ದ ಮಾಲನ್ನು ಮಾರಿ ಮದ್ಯ ಖರೀದಿಸಿ ಸ್ನೇಹಿತರಿಗೆ ಪಾರ್ಟಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಶನಿವಾರ ವಿಶಾಲ್ ಛಾಯಾಗ್ರಾಹಕನೊಬ್ಬನ ಮೇಲೆ ದಾಳಿ ಮಾಡಿ ಆತನ ಕೈಯಲ್ಲಿದ್ದ ಕ್ಯಾಮರಾ ದೋಚಿದ್ದ. ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದರು.

ಆರೋಪಿಯಿಂದ ಕ್ಯಾಮರಾವನ್ನು ವಶಪಡಿಸಿಕೊಂಡು ಅದರ ಮಾಲೀಕನಿಗೆ ನೀಡಲಾಗಿದೆ. ಈ ಹಿಂದೆ ಕೂಡ ವಿಶಾಲ್ ಇಂತಹ ದರೋಡೆ ಕೃತ್ಯಗಳನ್ನೆಸಗಿದ್ದಾನೆ ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶಾಲ್ ದಿಲ್ಲಿ ವಿವಿಯಿಂದ ಬಿಎ ಪದವಿ ಪಡೆದಿದ್ದು ತುಘಲಕ್‌ಬಾದ್‌ನಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದಾನೆ.

Comments are closed.