ಕ್ರೀಡೆ

ಟಿ20 ಕ್ರಿಕೆಟ್ ನ ಇತಿಹಾಸದಲ್ಲೇ ಹೊಸ ಐತಿಹಾಸಿಕ ದಾಖಲೆ: 4 ಓವರ್ ಗಳಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆದ ಇರ್ಫಾನ್

Pinterest LinkedIn Tumblr

ಬ್ರಿಡ್ಜ್ ಟೌನ್: ಟಿ20 ಕ್ರಿಕೆಟ್ ನ ಇತಿಹಾಸದಲ್ಲೇ ಐತಿಹಾಸಿಕ ದಾಖಲೆಯೊಂದು ನಿರ್ಮಾಣವಾಗಿದೆ. ಈ ವಿನೂತನ ದಾಖಲೆ ಯಾರು ಮಾಡಿದ್ದು ಎಲ್ಲಿ ಎಂಬುದು ಇಲ್ಲಿದೆ.

ಪಾಕಿಸ್ತಾನದ ವೇಗಿ ಮೊಹಮ್ಮದ್ ಇರ್ಫಾನ್ 4 ಓವರ್ ಗಳಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಟಿ20ಯಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)ನಲ್ಲಿ ಬಾರ್ಬಡೋಸ್ ಟ್ರೈಡೆಂಟ್ಸ್ ಪರ ಆಡುತ್ತಿರುವ ಇರ್ಫಾನ್ ಸೇಂಟ್ ಕಿಟ್ಸ್ ಅಂಡರ್ ನೆವಿಸ್ ಪೇಟ್ರಿಯಾಟ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಇನ್ನು ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ರನ್ನು ಇರ್ಫಾನ್ ಶೂನ್ಯಕ್ಕೆ ಔಟ್ ಮಾಡಿದ್ದರೆ ಇನ್ನು ಎವಿನ್ ಲಿವಿಸ್ 1 ರನ್ ಗಳಿಸಲಷ್ಟೇ ಅವಕಾಶ ಮಾಡಿಕೊಟ್ಟಿದ್ದರು.

Comments are closed.