
ಹೊಸದಿಲ್ಲಿ: ಶಕ್ತಿ ಶಾಲಿ ಭಾರತದ ನಿರ್ಮಾತೃ ಎಂದು ಕರೆಯಲ್ಪಡುವ ಅಟಲ್ ಬಿಹಾರಿ ವಾಜಪೇಯಿ, ನವ ಭಾರತ ನಿರ್ಮಾಣದ ಹರಿಕಾರ.
ಮೂರು ಬಾರಿ ದೇಶದ ಪ್ರಧಾನಿಯಾಗಿದ್ದ ಅಟಲ್ ಜಿ, ತಂತ್ರಜ್ಞಾನ, ಆಧುನಿಕ ರಕ್ಷಣಾ ಸಾಮಗ್ರಿ, ಯುದ್ಧ ತಂತ್ರ ಸೇರಿದಂತೆ ಭಾರತವನ್ನು ಸದೃಢ ಹಾಗೂ ಬಲಿಷ್ಠ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದರು.
1996ರಲ್ಲಿ ಬಿಜೆಪಿ ದೇಶದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸರಕಾರ ರಚಿಸುವಂತೆ ಅಂದಿನ ರಾಷ್ಟ್ರಪತಿ ಶಂಕರ್ ದಯಾಲ್ ಶರ್ಮ ಆಹ್ವಾನವಿತ್ತರು. ಅಟಲ್ ಜಿ ದೇಶದ 10ನೇ ಪ್ರಧಾನ ಮಂತ್ರಿಯಾದರು. ಆದರೆ ಮಿತ್ರ ಪಕ್ಷಗಳು ಮೈತ್ರಿ ಮುರಿದ ಹಿನ್ನೆಲೆಯಲ್ಲಿ ಕೇವಲ 13 ದಿನಗಳ ಕಾಲ ಪ್ರಧಾನಿಯಾಗಿದ್ದರು.
1998ರಲ್ಲಿ 2ನೇ ಬಾರಿಗೆ ಪ್ರಧಾನಿಯಾಗಿ ವಾಜಪೇಯಿ ಅಧಿಕಾರ ಸ್ವೀಕಾರಿಸಿದರು. ಒಂದೂವರೆ ವರ್ಷಗಳ ಬಳಿಕ ತಮಿಳುನಾಡು ಎಐಡಿಎಂಕೆ ಮೈತ್ರಿ ಕಡಿದುಕೊಂಡ ಬಳಿಕ ವಾಜಪೇಯಿ ಸರಕಾರ ಪತನಗೊಂಡಿತು. ಯಾವ ಪಕ್ಷಗಳೂ ಸರಕಾರ ರಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚುನಾವಣೆ ವರೆಗೆ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ವಾಜಪೇಯಿ ಕಾರ್ಯನಿರ್ವಾಹಕ ಪ್ರಧಾನಿಯಾಗಿದ್ದರು.
1999ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಮುನ್ನಡೆ ಸಾಧಿಸಿ, ಬಿಜೆಪಿ ನೇತೃತ್ವದಲ್ಲಿ ಎನ್ಡಿಎ ಸರಕಾರ ರಚಿಸಲಾಯಿತು. ಅಟಲ್ ಜಿ ಮತ್ತೆ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದರು.
ಅಟಲ್ ನೇತೃತ್ವದಲ್ಲಿ ಭಾರತ
* 1998ರಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ವಿಶ್ವವೇ ಬೆಚ್ಚಿ ಬೀಳಿಸುವಂತಹ ನಿರ್ಧಾರ
* ರಾಜಸ್ಥಾನದ ಪೋಖ್ರಾನ್ನಲ್ಲಿ ಅಪರೇಶನ್ ಶಕ್ತಿಗೆ ಚಾಲನೆ. 5 ಅಂಡರ್ಗ್ರೌಂಡ್ ನ್ಯೂಕ್ಲಿಯರ್ ಪರೀಕ್ಷೆ ನಡೆಸಿ ಯಶಸ್ವಿ.
* ಭಾರತವೂ ಅಣು ರಾಷ್ಟ್ರ ಎಂದು ಘೋಷಿಸಿದ ಪ್ರಧಾನಿ ವಾಜಪೇಯಿ.
ಅಣು ಪರೀಕ್ಷೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ದೇಶದ ಮೇಲೆ ಆರ್ಥಿಕ ನಿರ್ಬಂಧನೆಯನ್ನೂ ಹೇರಲಾಗಿತ್ತು. ಈ ಎಲ್ಲ ಪರಿಸ್ಥಿತಿಗಳನ್ನು ವಾಜಪೇಯಿ ದಿಟ್ಟವಾಗಿ ಎದುರಿಸಿ, ರಾಷ್ಟ್ರದ ಶಕ್ತಿ ಪ್ರದರ್ಶನ ಮಾಡಿದರು
ಕಾರ್ಗಿಲ್ ಯುದ್ಧ
1999ರ ಪಾಕಿಸ್ತಾನದಿಂದ ಭಾರತದ ಕಾಶ್ಮೀಯ, ಸಿಯಾಚಿನ್ ಭಾಗದ ವರೆಗೆ ಉಗ್ರರ ಒಳನುಸುಳುವಿಕೆ ಖಚಿತವಾಗಿತ್ತು. ಪಾಕಿಸ್ತಾನ ಸೇನೆಯ ಬೆಂಬಲವೂ ಇವರಿಗಿತ್ತು. ಸೇನೆಗೆ ಆಪರೇಷನ್ ವಿಜಯ್ ನಡೆಸುವಂತೆ ಪ್ರಧಾನಿ ಸೂಚನೆ ನೀಡಿದರು. ಸುಮಾರು ಮೂರು ತಿಂಗಳ ಯುದ್ಧದಲ್ಲಿ ಭಾರತೀಯ ಸೇನೆಯ 500ಕ್ಕೂ ಅಧಿಕ ಸೈನಿಕರು ವೀರ ಮರಣವನ್ನಪ್ಪಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ಗೆ ಮುಖಭಂಗ
* ಲಾಹೋರ್ ಸಮ್ಮಿಟ್
* ದಿಲ್ಲಿ ಹಾಗೂ ಲಾಹೋರ್ ನಡುವೆ ಬಸ್ ಸೇವೆ 1999ರ ಫೆಬ್ರವರಿಯಲ್ಲಿ ಆರಂಭಿಸಿದ ವಾಜಪೇಯಿ
* ರಾಷ್ಟ್ರೀಯ ಹೆದ್ದಾರಿ ಯೋಜನೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ಸುಧಾರಣೆ
*2002-03ರ ಅವಧಿಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಅತ್ಯಂತ ಉನ್ನತಿಗೆ ಏರಿತು. ಜಿಡಿಪಿ ಶೇ.6-7ರಲ್ಲಿತ್ತು. ಮಾಹಿತಿ ತಂತ್ರಜ್ಞಾನ, ಸಾರಿಗೆ ಸಂಪರ್ಕ ಕ್ರಾಂತಿ, ಜೈವಿಕ ತಂತ್ರಜ್ಞಾನ, ವಿದೇಶೀ ಬಂಡವಾಳ ಹೂಡಿಕೆ, ಕೈಗಾರಿಕೆಗಳಿಗೆ ಉತ್ತೇಜನ, ಉದ್ಯೋಗ ಸೃಷ್ಟಿ, ಕೃಷಿ ಸೇರಿದಂತೆ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಾದ ಅನೇಕ ಯೋಜನೆಗಳನ್ನು ಅಟಲ್ ಬಿಹಾರಿ ವಾಜಪೇಯಿ ಜಾರಿಗೊಳಿಸಿದರು.
* ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಪ್ರತಿ ಹಳ್ಳಿ, ಗ್ರಾಮಕ್ಕೂ ಸುಧಾರಿತ ರಸ್ತೆ ಸಂಪರ್ಕ ಯೋಜನೆ ಜಾರಿಗೊಳಿಸಿದ್ದರು.
ಎದುರಿಸಿದ ಪ್ರಮುಖ ಸಮಸ್ಯೆಗಳು
* 1999ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಉಗ್ರರ ಕೈವಶ. ಕಾಠ್ಮಂಡುವಿನಿಂದ ದಿಲ್ಲಿಗೆ ಪ್ರಯಾಣಿಸಬೇಕಿದ್ದ ವಿಮಾನವನ್ನು ಪ್ರಯಾಣಕರ ಸಹಿತ, ಅಘಘಾನಿಸ್ತಾನಕ್ಕೆ ಉಗ್ರರು ಒಯ್ದು, ತಾಲೀಬಾನಿ ಉಗ್ರ ಮಸೂದ್ ಅಜರ್ ಬಿಡುಗಡೆಗೊಳಿಸಲು ಉಗ್ರರು ಬೇಡಿಕೆ ಇಟ್ಟಿದ್ದರು. ಸೇನಾಪಡೆಯ ಯಾವುದೇ ಕಾರ್ಯಾಚರಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಬೇಡಿಕೆಗೆ ಒಪ್ಪಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲಾಗಿತ್ತು.
* 2001 ಡಿಸೆಂಬರ್ನಲ್ಲಿ ಸಂಸತ್ ಮೇಲೆ ಉಗ್ರರ ದಾಳಿ. ಆ ಬಳಿಕ ಭಯೋತ್ಪಾದನಾ ನಿಗ್ರಹಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರಕಾರ.
* 2002ರಲ್ಲಿ ಗುಜರಾತ್ನಲ್ಲಿ ನಡೆದ ಹಿಂದು – ಮುಸಲ್ಮಾನ್ ಗಲಭೆ. ಇದರಲ್ಲಿ ಸುಮಾರು 1 ಸಾವಿರ ಜನರು ಸಾವನ್ನಪ್ಪಿದ್ದರು. ಈ ಸಮಯದಲ್ಲಿ ಮುಸಲ್ಮಾರು ಹೆಚ್ಚಿರುವ ಭಾಗದಲ್ಲಿ ಶಾಂತಿ ಇರುವುದಿಲ್ಲ ಎಂಬ ಅವರ ಹೇಳಿಕೆ ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಅಲ್ಲದೆ ಬಳಿಕ ಈ ಸಂಬಧ ಪ್ರಧಾನ ಮಂತ್ರಿ ಕಚೇರಿಯಿಂದ ಸ್ಪಷ್ಟೀಕರಣವನ್ನೂ ನೀಡಿತ್ತು.
Comments are closed.