ರಾಷ್ಟ್ರೀಯ

11ರ ಬಾಲಕಿಯ ಅತ್ಯಾಚಾರಗೈದು ಫೋಟೋ ತೆಗೆದು, ಬ್ಲಾಕ್ ಮೇಲ್!

Pinterest LinkedIn Tumblr


ಲಕ್ನೋ: ಮದರಸಾದ ಮ್ಯಾನೇಜರ್ ಹಾಗೂ 5 ಮಂದಿ ಸೇರಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದು ಉತ್ತರಪ್ರದೇಶದ ಘೋಸಿ ಪ್ರದೇಶದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್ 4ರಂದು ಮದರಸಾದ ಮ್ಯಾನಜರ್ ಹಾಗೂ 4 ಮಂದಿ ಸೇರಿ ಅಪ್ರಾಪ್ತ ಬಾಲಕಿಯನ್ನು ಒಂದು ಕೋಣೆಯೊಳಗೆ ಕೂಡಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಬಂಧನವಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆಗೆ ಬಲೆ ಬೀಸಲಾಗಿದೆ ಅಂತ ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

ಅತ್ಯಾಚಾರವೆಸಗಿದ ಬಳಿಕ ಆರೋಪಿಗಳು ಈ ಕುರಿತು ಪೊಲೀಸರಿಗೆ ದೂರು ಕೊಡದಂತೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಅವರು ಬಾಲಕಿಯ ಅಸಭ್ಯ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಅಂತ ವಿವರಿಸಿದ್ದಾರೆ.

ಸಂತ್ರಸ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದರಸಾ ಮ್ಯಾನೇಜರ್ ಹಾಗೂ 5 ಮಂದಿ ಕೋಣೆಯೊಳಗೆ ಅತ್ಯಾಚಾರವೆಸಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅದರ ವರದಿ ಇನ್ನಷ್ಟೇ ಬರಬೇಕಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಅಂತ ಎಎಸ್‍ಪಿ ಶೈಲೇಂದ್ರ ಶ್ರೀವತ್ಸವ್ ಹೇಳಿದ್ದಾರೆ.

Comments are closed.