ರಾಷ್ಟ್ರೀಯ

ಮುಂಬಯಿಯ ಧಾರಾವಿ ತಮಿಳರಿಗಾಗಿ ಶಾಲೆ, ಗ್ರಂಥಾಲಯ ಕೊಡಿಸಿದ್ದ ಕರುಣಾನಿಧಿ

Pinterest LinkedIn Tumblr


ಮುಂಬಯಿ : ತಮಿಳರ ಪ್ರಾಬಲ್ಯವಿರುವ ಮುಂಬಯಿಯ ಧಾರಾವಿಯಲ್ಲಿ 35 ವರ್ಷಗಳ ಹಿಂದೆ ಅಲ್ಲಿನ ತಮಿಳರ ಕೋರಿಕೆಯ ಮೇರೆಗೆ ಅಲ್ಲಿ ತಮಿಳು ಶಾಲೆ ಮತ್ತು ಗ್ರಂಥಾಲಯವೊಂದನ್ನು ತೆರೆಯಲು ದಿವಂಗತ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಹಣಕಾಸು ನೆರವು ನೀಡಿ ಇವೆರಡೂ ಆರಂಭವಾಗುವುದಕ್ಕೆ ಕಾರಣೀಭೂತರಾಗಿದ್ದರು ಎಂದು ಡಿಎಂಕೆ ಮುಂಬಯಿ ಘಟಕದ ಪ್ರಭಾರಿ ಆರ್‌ ಪಳನಿಸ್ವಾಮಿ ಇಂದು ನೆನಪಿಸಿಕೊಂಡಿದ್ದಾರೆ.

“ನಮ್ಮ ಘಟಕಕ್ಕೆ ಭೇಟಿ ನೀಡುವಂತೆ ನಾವು ಮಾಡಿಕೊಂಡ ಮನವಿಯನ್ನು ಕರುಣಾನಿಧಿ ಒಪ್ಪಿಕೊಂಡದ್ದು ಮಾತ್ರವಲ್ಲದೆ ಇಲ್ಲಿನ ತಮಿಳರಿಗೆ ಒಂದು ಸಮುದಾಯ ಶಾಲೆ ಮತ್ತು ಗ್ರಂಥಾಲಯ ಬೇಕೆಂಬ ಕೋರಿಕೆಯನ್ನು ಅವರು ಕೂಡಲೇ ಮನ್ನಿಸಿ ಅದು ಸ್ಥಾಪಿತವಾಗುವಂತೆ ನೋಡಿಕೊಂಡರು’ ಎಂದು ಪಳನಿಸ್ವಾಮಿ ಹೇಳಿದರು

Comments are closed.